ಬೆಂಗಳೂರು: ಲೈಂಗಿಕ ಆರೋಪ ಒತ್ತಿರುವ ಮುರುಘಾ ಮಠದ ಶ್ರೀಗಳಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಯವರ ಸ್ವಾಮೀಜಿ ಪರ ಮಾತನಾಡಿದ್ದಕ್ಕೆ ರಾಜ್ಯಪಾಲರಿಗೆ ಮಾನವ ಹಕ್ಕುಗಳ ಹೋರಾಟಗಾರ ದೂರು ನೀಡಿದ್ದಾರೆ.
ಮುರುಘಾ ಮಠದ ಶ್ರೀಗಳು ಗೃಹ ಮಂತ್ರಿಗಳೇ ಅವರ ಪರವಾಗಿ ಮಾತಾಡಿದ್ದಾರೆ. ಅವರ ಬಂಧನ ಮಾಡೋದಕ್ಕೆ ನಿಷ್ಕಾಳಜಿ ವಹಿಸುತ್ತಿದ್ದಾರೆ. ವೈ ಕೆಟಗರಿಯ ನಾಲ್ಕು ಜನ ಅವರಿಗೆ ಭದ್ರತೆಯನ್ನೂ ನೀಡಿದ್ದಾರೆ. ಒಬ್ಬ ವಿಐಪಿಯನ್ಬ ಅರೆಷ್ಟ್ ಮಾಡೋಕೆ ಆಗಿಲ್ಲ.
ಪೋಕ್ಸೋ ಪ್ರಕರಣದಲ್ಲಿ A 1 ಆರೋಪಿಯಾಗಿ ಮುರುಘಾ ಶ್ರೀ ಇದ್ದಾರೆ. ಜಾತಿ ಬಣ್ಣ ಹಚ್ಚಿ ಅವರನ್ನ ಟ್ರೀಟ್ ಮಾಡಬಾರದು. ಅಮಾಯಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಮುಖ್ಯವಾಗಿ ಕೇಂದ್ರ ತನಿಖಾ ಸಂಸ್ಥೆಗೆ ಈ ಪ್ರಕರಣ ನೀಡಬೇಕು ಎಂದು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯ ತನಿಖಾ ಸಂಸ್ಥೆ ಈ ಪ್ರಕರಣವನ್ನ ವಹಿಸಬಾರದು. ಮುರುಘಾ ಶ್ರೀಗಳ ಪ್ರಕರಣವನ್ನ ಹೈಕೋರ್ಟ್ ನ್ಯಾಯಾಧೀಶರೇ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ರಾಘವೇಂದ್ರ ಅವರಿಂದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.