ಬಳ್ಳಾರಿ : ಗಣೇಶ ಚತುರ್ಥಿ ಬಂದೇ ಬಿಡ್ತು. ಹೀಗಾಗಿ ನಾಲ್ಕೈದು ತಿಂಗಳಿಂದ ಕೊಲ್ಕತ್ತಾ ಮೂಲದ ಕಲಾವಿದರ ಕುಟುಂಬ ಬಳ್ಳಾರಿಯ ರಾಮೇಶ್ವರಿ ನಗರದ ಬಳಿ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ದಪಡಿಸಿತ್ತು. ಆದರೆ, ಶನಿವಾರ ತಡರಾತ್ರಿ ಸುರಿದ ಧಾರಾಕಾರ ಮಳೆ ಅವಾಂತರಗಳನ್ನು ಸೃಷ್ಟಿ ಮಾಡಿದೆ. ನೂರಾರು ಗಣೇಶನ ಮೂರ್ತಿಗಳಿದ್ದ ಶೆಡ್ನೊಳಗೆ ನೀರು ನುಗ್ಗಿದ್ದು, ಗಣೇಶನ ಮೂರ್ತಿಗಳು ನೀರಿಗೆ ಆಹುತಿಯಾಗಿವೆ.ಇದು ಕಲಾವಿದರನ್ನುಸಂಕಷ್ಟಕ್ಕೆ ತಳ್ಳಿದೆ.
ಇನ್ನೂ ಮಣ್ಣಿನ ಗಣೇಶನ ಮೂರ್ತಿಗಾಗಿ ಸಾರ್ವಜನಿಕರು ಕೂಡ ಮುಂಗಡ ಹಣ ನೀಡಿದ್ರು. ಈಗ ಮುಂಗಡ ಹಣ ನೀಡಿದವರೆಲ್ಲಾ ಈಗ ಗಣೇಶನ ಮೂರ್ತಿಗಳು ಬೇಕು ಅಂತಾ ಕೇಳುತ್ತಿದ್ದಾರೆ. ಆದರೆ ಗಣೇಶನ ಮೂರ್ತಿಗಳಿಗೆ ಸಾಕಷ್ಟು ಹಾನಿಯಾಗಿವೆ.ಈಗ ಸರಿಪಡಿಸುವಷ್ಟು ಕಾಲಾವಕಾಶ ಇಲ್ಲ. ಇದು ಕಲಾವಿದರನ್ನುಕಂಗೆಡಿಸಿದೆ.
ಗಣೇಶನ ಮೂರ್ತಿಗಳನ್ನು ಮತ್ತೆ ಸಿದ್ದಪಡಿಸಲು ಕಾಲಾವಕಾಶ ಕೂಡ ಇಲ್ಲದ ಕಾರಣ ಕಲಾವಿದರು, ಈಗ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕಿದೆ.
ಬಸವರಾಜ್ ಹರನಹಳ್ಳಿ ಪವರ್ ಟಿವಿ, ಬಳ್ಳಾರಿ