ಬೆಂಗಳೂರು : ನಮ್ಮ ಮೆಟ್ರೋಗೆ ಜನ್ರನ್ನ ಆಕರ್ಷಿಸಲು ಬಿಎಂಆರ್ ಸಿ ಎಲ್ ಹೊಸ ಯೋಜನೆಯೊಂದಕ್ಕೆ ಕೈಹಾಕಿದೆ. ನಮ್ಮ ಮೆಟ್ರೋದ ಬಹುದೊಡ್ಡ ಸಮಸ್ಯೆಯಾದ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ನಿಗಮ ಯೋಜನೆಯನ್ನು ರೂಪಿಸಿದೆ. ಕೆಲ ಮೆಟ್ರೋ ಸ್ಟೇಷನ್ ಗಳಲ್ಲಿ ಜನರಿಗೆ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ.ಮೆಟ್ರೋ ಪ್ರಯಾಣಿಕರು ಸಂಚಾರ ಮುಗಿಸಿದ ನಿಲ್ದಾಣದಿಂದ ಆಚೆ ಬಂದ್ರೆ ಹತ್ತಾರು ಆಟೋಗಳು ಕಾಣುತ್ತವೆ. ಆದರೆ ಕೆಲ ಆಟೋಗಳು ಕರೆದ ಕಡೆ ಬರಲ್ಲ, ಇನ್ನೂ ಕೆಲವರು ಕೇಳಿದ ರೇಟ್ ನೀಡೋಕೆ ಆಗಲ್ಲ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆಂದು ನಮ್ಮ ಮೆಟ್ರೋ ನಿರ್ಧಾರ ಮಾಡಿದೆ.
ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ. ಮೆಟ್ರೊ ನಿಲ್ದಾಣಗಳಿಂದ ಆಸುಪಾಸಿನ ಮನೆಗಳಿಗೆ ಆಟೋ ಚಾಲಕರು ಹೆಚ್ಚಿನ ದರವನ್ನು ಕೇಳುತ್ತಿದ್ದು, ಟ್ರಾಫಿಕ್ ಪೊಲೀಸರೂ ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಹೀಗಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪೊಲೀಸ್ ಇಲಾಖೆ ಹಾಗೂ ನಮ್ಮ ಅಧಿಕಾರಿಗಳು ಚರ್ಚೆ ನಡೆಸಿದ್ದು,ಶೀಘ್ರದಲ್ಲೇ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ ನೀಡಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಅಂತ ಬಿಎಂಟಿಸಿ ಬಸ್ ಬಿಟ್ಟು ಕೈಸುಟ್ಟುಕೊಂಡಿತ್ತು. ಮೆಟ್ರೋಗೆ ಹೆಲ್ಪ್ ಮಾಡೋಕೆ ಹೋಗಿ ಫುಲ್ ಲಾಸ್ ಆಗಿದ್ರಿಂದ ಇದ್ರ ಸಹವಾಸವೇ ಬೇಡಪ್ಪ ಅಂತ ಬಿಎಂಟಿಸಿ ಸುಮ್ಮನಾಗಿತ್ತು. ಆದ್ರೆ, ಈಗ ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಹೊಸ ಯೋಜನೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಷ್ಟೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು