ಬೆಂಗಳೂರು : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಇದೆ ಹತ್ತಾರು ವಿಘ್ನ ಎದುರಾಗಿದ್ದು, ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆ ನಡಯುತ್ತಾ ಇಲ್ಲವೋ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು, ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆ ಮಾಡಲು ಪೊಲೀಸ್ ಇಲಾಖೆ ನೀಡಿದ ಶಿಫಾರಸ್ಸುಗಳೇನು..? ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆ ಮಾಡುವುದರ ಬಗ್ಗೆ ಕಂದಾಯ ಇಲಾಖೆಗೆ ಕೆಲವು ಶಿಫಾರಸ್ಸು ನೀಡಲು ಚಿಂತನೆ ನಡೆಸಿದೆ.
1. ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಅಚರಣೆಗೆ ಪೊಲೀಸ್ ಇಲಾಖೆ ನಕಾರ.
2. ಒಂದು ಸಂಘಟನೆಗೆ ಅವಕಾಶ ಕೊಟ್ರೆ ಹಲವು ಸಂಘಟನೆಗಳು ಅನುಮತಿ ಕೇಳ್ತಾರೆ.
3 ಹೀಗಾಗಿ ಪೊಲೀಸ್ ಬಂದೋಬಸ್ತ್ ತುಂಬಾ ಕಠಿಣ
4. ಗಣೇಶ ವಿಗ್ರಹ ಸ್ಥಾಪನೆಗೆ ಅವಕಾಶ ಕೊಟ್ರೆ ನಾಲ್ಕೈದು ದಿನ ಭದ್ರತೆ ನೀಡಲು ಕಷ್ಟ ಆಗಲಿದೆ
5. ಗಣೇಶ ಮೆರೆವಣಿಗೆ ವೇಳೆ ಗಲಾಟೆ ಸಂಭವಿಸುವ ಸಾಧ್ಯತೆಗಳೇ ಹೆಚ್ಚು
6. ಇದು ಕೋಮು ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡಲು ಅವಕಾಶ ಮಾಡಿದಂತಾಗುತ್ತೆ
7.. ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣ ಆಗಬಹುದು..
8. ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಅವಕಾಶ ನೀಡಿ.
9.ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದೆಗೆಡುವ ಸಾಧ್ಯತೆ.
10.ಕಿಡಿಗೇಡಿಗಳು ಇದನ್ನೆ ಬಂಡವಾಳ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.