Monday, November 18, 2024

ಮಳೆ ನಿಂತರೂ ಇನ್ನೂ ತಪ್ಪದ ಗುಡ್ಡ ಕುಸಿಯುವ ಆತಂಕ

ಕಾರವಾರ : ಉತ್ತರಕನ್ನಡ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆಗೆ ಸಾಕಷ್ಟು ಜನ್ರು ಮನೆ ಮಠ ಕಳೆದುಕೊಳ್ಳುವುದರೊಂದಿಗೆ ಜೀವಹಾನಿಯೂ ಸಹ ಉಂಟಾಗಿದೆ. ಆದ್ರೆ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆ‌ ಕಡಿಮೆ ಆಗಿದೆ. ಆದ್ರೆ, ಸಮಸ್ಯೆ ಮಾತ್ರ ನಿಂತಿಲ್ಲ. ಜೋಯಿಡಾ ತಾಲೂಕಿನ ಅಣಸಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಳೆ ನಿಂತರೂ ಹೆದ್ದಾರಿಯಲ್ಲಿ ಕುಸಿತವಾಗಿರುವ ಕಲ್ಲುಮಣ್ಣುಗಳನ್ನು ಇನ್ನೂ ತೆರವು ಮಾಡಿಲ್ಲ.ಅಲ್ಲದೆ, ಇನ್ನೂ ಕೂಡ ಹೆದ್ದಾರಿ ಪಕ್ಕದಲ್ಲಿ ಅಲ್ಲಲ್ಲಿ ಗುಡ್ಡಗಳು ಕುಸಿತವಾಗುತ್ತಾ ಇದೆ. ಹೀಗಾಗಿ ಕಳೆದ ಎರಡು ತಿಂಗಳುಗಳಿಂದ ಜಿಲ್ಲಾಡಳಿತ ಅಣಶಿ ಹೆದ್ದಾರಿಯಲ್ಲಿ ಸಂಚಾರ ನಿಷೇಧ ಮಾಡಿದ್ದು, ಇನ್ನೂ ಕೂಡ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಲ್ಲ.

ಇನ್ನೂ ಅಣಶಿ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿರೋದ್ರಿಂದ ಜೊಯೀಡಾದಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುವವರು ನೂರಾರು ಕಿಲೋಮೀಟರ್ ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರ, ಬೆಳಗಾವಿ,ಮುಂಬೈ ಕಾರವಾರಕ್ಕೆ ಬರಬೇಕಾದ್ರೆ ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಗಣೇಶನ ಹಬ್ಬಕ್ಕೆ ಕಾರವಾರಕ್ಕೆ ಬರುವವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ , ಬೆಳಗಾವಿಯಿಂದಲ್ಲೆ ಬರಬೇಕಾಗಿದ್ದು, ಈಗ ಅಣಶಿ ಹೆದ್ದಾರಿ ಬಂದ್ ಆಗಿರುವುದು ಸಂಕಷ್ಟ ತರಿಸಿದೆ.

ಒಟ್ಟಾರೆ ಉತ್ತರಕನ್ನಡ ಜಿಲ್ಲೆಯಲ್ಲಿ ವರುಣ ತನ್ನ ಆರ್ಭಟವನ್ನು ಮುಗಿಸಿ ಹೋಗಿದ್ರೂ ಮಳೆಯಿಂದ ಆಗಿರುವ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES