ಬೆಂಗಳೂರು : ಸಾವರ್ಕರ್ ಗಣೇಶೋತ್ಸವ ಸೌಂಡಿನ ಮಧ್ಯೆ ಈಗ ಶಂಕರ್ ನಾಗ್ ಹಾಗೂ ಅಪ್ಪು ಗಣೇಶೋತ್ಸವದ ಸದ್ದು ಹೆಚ್ಚಾಗಿದೆ. ಸಾವರ್ಕರ್ ಗಣೇಶೋತ್ಸವ ಆಚರಣೆಗೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟ ಬೆನ್ನಲ್ಲೇ ಈಗ ಕೆಲ ಕನ್ನಡ ಸಂಘಟನೆಗಳು ಇದನ್ನು ವಿರೋಧಿಸಿದ್ದು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಆತ ಮರಾಠಿಗ, ನಾವ್ಯಾಕೆ ಆತನನ್ನು ಗಣೇಶೋತ್ಸವದಲ್ಲಿ ಪೂಜಿಸಬೇಕು. ನಾವು ಶಂಕರ್‌ನಾಗ್, ಅಪ್ಪುರನ್ನು ಗಣೇಶೋತ್ಸದಲ್ಲಿ ಪೂಜಿಸ್ತೇವೆ ಅಂತಾ ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿ ಹಿಂದೂ ಮುಸ್ಲಿಂ ಅನ್ನೋ ಬೇಧಬಾವ ಇಲ್ಲ. ಇಲ್ಲಿ ನಾವೆಲ್ಲರೂ ಒಂದಾಗೆ ಇದ್ದೀವಿ. ರಾಜಕೀಯ ಲಾಬಕ್ಕೋಸ್ಕರ ವೀರಸಾವರ್ಕರ್ ಗಣೇಶೋತ್ಸವ ಬೇಕಾಗಿಲ್ಲ. ಬೇಕಿದ್ರೆ ಜಯಚಾಮರಾಜೇಂದ್ರ ಒಡೆಯರ್ ಹೆಸರಲ್ಲಿ ಗಣೇಶೋತ್ಸವ ಮಾಡಿ ಅದಕ್ಕೆ ಯಾವುದೇ ಅಭ್ಯಂತರ ಇಲ್ಲ ಅಂತ ನಾಗರೀಕರು ಆಗ್ರಹಿಸುತ್ತಿದ್ದಾರೆ.
ಇನ್ನು ನಮ್ಮ ರಾಜ್ಯಕ್ಕೆ ಮರಾಠಿ ವೀರ ಸಾವರ್ಕರ್‌ರ ಕೊಡುಗೆ ಏನೂ ಇಲ್ಲ, ಪುನೀತ್ ರಾಜ್‌ಕುಮಾರ್ ಕೋಟ್ಯಂತರ ಜನರಿಗೆ ಮಾದರಿಯಾಗಿದ್ದರು, ಅದೇ ರೀತಿ ಶಂಕರ್ ನಾಗ್ ಸುಮಾರು ದಶಕಗಳ ಹಿಂದೆ ಮೆಟ್ರೋ ಕನಸು ಕಂಡಿದ್ದರು, ನಂದಿ ಬೆಟ್ಟಕ್ಕೆ ರ್ಯಾಂಪ್ ಯೋಜನೆಯ ಬಗ್ಗೆಯೂ ಚಿಂತಿಸಿದ್ರು. ಬೇಕಿದ್ರೆ ಶಂಕರ್ ನಾಗ್ ಹಾಗೂ ಅಪ್ಪು ಗಣೇಶೋತ್ಸವವನ್ನು ಮಾಡಿ ಅಂತಿದ್ದಾರೆ.
ಆದ್ರೆ, ರಾಜಕೀಯದಾಟಕ್ಕೆ ಸಾವರ್ಕರ್ ವಿಚಾರ ಎಳೆದಾಡುವ ಸಂದರ್ಭದಲ್ಲಿ ಶಂಕರ್ ನಾಗ್ ಹಾಗೂ ಅಪ್ಪು ವಿಚಾರವನ್ನು ಯಾಕೆ ಮಧ್ಯೆ ತುರುತ್ತಿದ್ದೀರಾ. ಬೇಕಿದ್ರೆ ಜಯಚಾಮರಾಜೇಂದ್ರ ಒಡೆಯರ್ ಹೆಸರಲ್ಲೇ ಗಣೇಶೋತ್ಸವ ಆಚರಣೆ ಆಗಲಿ ಅಂತಾ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸ್ತಾ ಇದ್ದು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಕಾದು ನೋಡ್ಬೇಕಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು