ದೆಹಲಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯ ಬಿಜೆಪಿ ಸರ್ಕಾರದ ಸಚಿವರ ಮೇಲೆ 40% ಕಮಿಷನ್ ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವ ಮುನಿರತ್ನ ಸ್ಪಷ್ಟನೆ ನೀಡಿದ್ದಾರೆ.
ಗುತ್ತಿಗೆದಾರರ ಸಂಘದವರು ಮಾಜಿ ಸಿಎಂ ಸಿದ್ದರಾಮಯ್ಯನವರು, ಕೋಲಾರದಲ್ಲಿ ಚುನಾವಣೆ ಸ್ಪರ್ಧೆ ಮಾಡುವ ಆಕಾಂಕ್ಷಿ ಇರುವವರು. ಅವರು ಕೋಲಾರದಿಂದ ಸ್ಪರ್ಧೆ ಮಾಡಿದ್ರು ಆಶ್ಚರ್ಯವಿಲ್ಲ. ಸಿದ್ದರಾಮಯ್ಯನವರ ಮಾರ್ಗದರ್ಶನದಂತೆ ಇಂದು ಅವರ ಮನೆಗೆ ಹೋಗಿ, ಅವರು ಹೇಳಿದಂತೆ ನಮ್ಮ ಸರ್ಕಾರ ಮತ್ತು ಉಸ್ತುವಾರಿ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಯಾರಿಗಾದ್ರು ತೊಂದರೆಯಾದ್ರೆ ಕೋರ್ಟ್ ಗೆ, ಲೋಕಾಯುಕ್ತಕ್ಕೆ ಹೋಗಿರೊದು ನೋಡಿದ್ದೆನೆ. ಆದರೆ ಕೋಲಾರದ ವಿಚಾರದಲ್ಲಿ ಸಿದ್ದರಾಮಯ್ಯ ಮನೆಗೆ ಹೋಗಿರೊದು ಇದರಲ್ಲೆ, ಸಿದ್ದರಾಮಯ್ಯ ಜೊತೆ ಒಂದುವರೆಗಂಟೆಗಳ ಕಾಲ ಚರ್ಚೆ ಮಾಡಿ ಹೊರ ಬಂದು ಆರೋಪ ಮಾಡಿದ್ದಾರೆ. ಇದರ ಹಿಂದಿನ ದುರುದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.
ಯಾರಿಗೆ ಎಷ್ಟು ಅನ್ಯಾಯವಾಗಿದೆ, ಯಾವ ರೀತಿಯಲ್ಲಿ ಅನ್ಯಾಯವಾಗಿದೆ. ಸುಳ್ಳು ಆರೋಪ ಮಾಡುವುದು, ಗಾಳಿಯಲ್ಲಿ ಗುಂಡು ಹೊಡಿಯೋದು ಆಗಿದೆ. ವಿರೋಧ ಪಕ್ಷದ ಕೈಗೊಂಬೆಯಾಗಿ ಗುತ್ತಿಗೆದಾರರ ಸಂಘ ಕೆಲಸ ಮಾಡ್ತಿದೆ. ಮಾನ ನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಗುತ್ತಿಗೆದಾರರಿಗೆ ಅನ್ಯಾಯವಾಗಿದ್ರೆ ನಾನು ಅವರ ಜೊತೆ ಇರುತ್ತೇನೆ. ಎಲ್ಲಿ ಅನ್ಯಾಯವಾಗಿದೆ, ಯಾರಿಗೆ ಅನ್ಯಾಯವಾಗಿದೆ ಹೇಳಲಿ, ಲಂಚದ ಆರೋಪ ಹೊರಿಸೋರಿಗೆ ಯಾಕೆ ಭಯ. ನಾನು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಕಾನೂನಿನ ಪ್ರಕಾರ ಹೊರಾಟ ಮಾಡುತ್ತೇನೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹಿಂದಿನ ಮಾರ್ಗದರ್ಶಕರು ಸಿದ್ದರಾಮಯ್ಯನವರು ಆಗಿದ್ದಾರೆ. ಇವರ ಹತ್ತಿರ ದಾಖಲೆಗಳು ಒಂದಾದ್ರು ನೀಡಬೇಕಿತ್ತು. ಪ್ರಧಾನಿಗೆ ಪತ್ರಬರೆಯೋ ಸ್ವಾತಂತ್ರ್ಯ ಎಲ್ಲರಿಗೂ ಇದೆ. 40% ಕಮಿಷನ್ ಯಾರಿಗೆ ಕೊಟ್ಟಿದ್ದಾರೆ, ಯಾರು ಕೇಳಿದ್ದಾರೆ, ನಿಮಗೆ ಹೇಗೆ ಅನ್ಯಾಯವಾಗಿದೆ ಆ ಬಗ್ಗೆ ಹೇಳಿ, ಯಾಕೆ ಇವರು ಲೋಕಾಯುಕ್ತಕ್ಕೆ, ಎಸಿಬಿಗೆ ಹೋಗುತ್ತಿಲ್ಲ. ಯಾವ ಅಧಿಕಾರಿ ಕೇಳಿದ್ದಾರೆ, ಹೆಂಗೆ 40% ಕಮಿಷನ್ ಆಯ್ತು. ಎಲ್ಲದರ ಬಗ್ಗೆ ದಾಖಲೆಯನ್ನ ಕೊಡಿ, ತನಿಖೆಗೆ ಆದೇಶ ನೀಡುತ್ತಾರೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.