ತುಮಕೂರು: ಶಿಕ್ಷಕಿ ಮೇಲೆ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುವ ಆರೋಪ ಜಿಲ್ಲೆಯ ತಾಲೂಕು ಹೆಬ್ಬೂರಿನ ನರಸಾಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ಕೇಳಿಬಂದಿದೆ.
ಕನ್ನಡ ಶಿಕ್ಷಕಿ ಮುಬಿನಾ ಮೇಲೆ ವಿದ್ಯಾರ್ಥಿನಿಯರ ಆರೋಪ ಮಾಡಿದ್ದಾರೆ. ಶಿಕ್ಷಕಿ ಮುಬಿನಾಳ ಮಗು ಆರೈಕೆ ಮಾಡಲು, ಪಾತ್ರೆ ತೊಳೆಯೋದು, ಮನೆಯ ನೆಲ ವರೆಸುವ ಕೆಲಸಕ್ಕೆ ವಿದ್ಯಾರ್ಥಿನಿಯರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.
ಇನ್ನು ಈ ಶಿಕ್ಷಕಿಯ ಮನೆ ಕೆಲಸ ಮಾಡಿಕೊಡದೇ ಇರುವ ವಿದ್ಯಾರ್ಥಿನಿಯರ ಆಂತರಿಕ ಅಂಕ ಕಡಿತ ಮಾಡುತ್ತಾರೆ ಎಂದು ಒಂದು ಗುಂಪಿನ ವಿದ್ಯಾರ್ಥಿನಿಯರು ಆರೋಪ ಮಾಡಿದರೆ, ಇನ್ನೊಂದು ಗುಂಪಿನ ವಿದ್ಯಾರ್ಥಿನಿಯರು ಆರೋಪ ಮಾಡಿದವರ ವಿರುದ್ಧ ತಿರುಗಿಬಿದ್ದಿದ್ದಾರೆ. ಶಿಕ್ಷಕಿ ಮುಬಿನಾಳರಿಂದ ವಿದ್ಯಾರ್ಥಿ ನಿಯರ ಎರಡು ಗುಂಪು ಸೃಷ್ಟಿಯಾಗಿ ನಡುವೆ ಗಲಾಟೆಯಾಗಿದೆ.
ಎರಡು ಗುಂಪಿನ ವಿದ್ಯಾರ್ಥಿನಿಯರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ಕ್ಯಾಮರಾ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಜೊತೆಗೆ ಪುರುಷ ಟೀಚರ್ ಜೊತೆ ಮಾತನಾಡಿದ್ರೆ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ಶಿಕ್ಷಕಿ ಮುಬೀನಾ ನಿಂದಿಸಿದ್ದಾರೆ.