ದಾವಣಗೆರೆ: ರೈತ ಮಹಿಳೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಹಿನ್ನಲೆಯಲ್ಲಿ ಮಹಿಳೆ ಸಾವೀಗಿಡಾಗಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ನಡೆದಿದೆ.
ಮೆಕ್ಕೆಜೋಳ ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಜಮೀನಿನಲ್ಲಿಯೇ ಕಮಲಾಬಾಯಿ(54) ಮೃತಪಟ್ಟಿದ್ದಾಳೆ. ದಾಳಿ ಮಾಡಿ ನೂರು ಅಡಿಯಷ್ಟು ದೂರು ಮಹಿಳೆಯನ್ನ ಚಿರತೆ ಹೊತ್ತೊಯ್ದಿದೆ. ಬಳಿಕ ಅಕ್ಕಪಕ್ಕದ ಜಮೀನಿನವರಿಂದ ಮಹಿಳೆ ರಕ್ಷಣೆಗೆ ಯತ್ನ ಮಾಡಲಾಗಿದೆ.
ಚಿರತೆ ಮಹಿಳೆಯನ್ನು ಹೊತ್ತೊಯ್ದಿದ್ದನ್ನ ನೋಡಿದ ಪಕ್ಕದ ಜಮೀನಿನ ಮಾಲಿಕರು ಬಳಿಕ ಕಿರುಚಾಡಿ ಚಿರತೆಯನ್ನ ಓಡಿಸಿದ್ದಾರೆ. ಇನ್ನು ಈ ಘಟನೆಯಿಂದ ಸುತ್ತಮುತ್ತಲಿನ ಜಮೀನಿನ ರೈತರು ಬೆಚ್ಚಿ ಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ.
ಕಳೆದ 15 ದಿನಗಳ ಹಿಂದಷ್ಟೆ ಒಂದು ಚಿರತೆಯನ್ನ ಸೆರೆ ಹಿಡಿಯಲಾಗಿತ್ತು. ಇದೀಗ ದಾಳಿ ಮಾಡಿ ಮಹಿಳೆಯನ್ನ ಚಿರತೆ ಬಲಿ ಪಡೆದಿದೆ. ಬಳಿಕ ಮಾಹಿತಿ ತಿಳಿದು ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ನ್ಯಾಮತಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.