ಬೆಂಗಳೂರು: ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು. ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಈ ಬಾರಿಯೂ ಬ್ಯಾನ್ ಮಾಡಲಾಗಿದೆ. ನಿಷೇಧಿತ ಗಣೇಶನ ಮೂರ್ತಿ ಬಳಸಿದರೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಂದ ಅಧಿಕೃತ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದಾರೆ.
ಗಣೇಶಮೂರ್ತಿ ತಯಾರಿಸುವವರು ಪರಿಸರ ಸ್ನೇಹಿ ಮೂರ್ತಿಯನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು. ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಲು ವ್ಯವಸ್ಥೆ ಮಾಡುವುದು, ಬಕೆಟ್, ಡ್ರಮ್ ಮುಂತಾದವುಗಳಿಗೆ ವಿಸರ್ಜಿಸುವುದು.
ಇನ್ನು ದೊಡ್ಡ ಗಾತ್ರದ ಗಣೇಶನ ಮೂರ್ತಿ ವಿಸರ್ಜನೆಯನ್ನು ಪಾಲಿಕೆ ಗುರುತಿಸುವ ಜಾಗದಲ್ಲೇ ಅಥವಾ ಕಲ್ಯಾಣಿಯಲ್ಲೇ ಮಾಡುವುದು ಕಡ್ಡಾಯವಾಗಿದೆ. ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ, ಕೆರೆಗಳಲ್ಲಿ ಬಿಬಿಎಂಪಿ ವತಿಯಿಂದಲೇ ನುರಿತ ಈಜುಗಾರರು ಹಾಗೂ ಎನ್ಡಿಆರ್ಎಫ್ ತಂಡ ನೇಮಕ ಮಾಡಲಾಗುವುದು.
ಗಣೇಶೋತ್ಸವ ಸುಸೂತ್ರವಾಗಿ ನಡೆಯಲು ಬಿಬಿಎಂಪಿಯಿಂದಲೇ ವಾರ್ಡ್ ಗೆ ಒಬ್ಬರಂತೆ ನೋಡಲ್ ಅಧಿಕಾರಿಯ ನೇಮಕ ಮಾಡಲಾಗಿದೆ. ಗಣೇಶೋತ್ಸವ ಆಚರಣೆ ವೇಳೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.