ಬೆಂಗಳೂರು: ಮಾಂಸ ತಿನ್ನೋದು ಸಮಸ್ಯೆ ಅಲ್ಲವೇ ಅಲ್ಲ. ನಾನು ಮಾಂಸನೂ ತಿನ್ತೀನಿ, ವೆಜ್ ತಿನ್ತೀನಿ. ಆಹಾರ ತಿನ್ನೋದು ಅವ್ರವ್ರ ಸ್ವಾತಂತ್ರ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಿಎಂ, ಮಾಂಸ ಆಹಾರದಲ್ಲಿ ಬಿಜೆಪಿಯವರು ಸುಮ್ನೆ ರಾಜಕೀಯ ಮಾಡುತ್ತಿದ್ದಾರೆ. ನಾನು ಮಾಂಸಾಹಾರಿ
ನಾನು ಕುರಿ, ಮೇಕೆ, ಕೋಳಿ ಮಾಂಸ ತಿನ್ತೀನಿ, ಹಂದಿ ಮಾಂಸ ತಿನ್ನಲ್ಲ. ಹಂದಿ ಮಾಂಸ ತಿನ್ನೋದು ಅವ್ರವ್ರ ಅಭಿರುಚಿಯಾಗಿದೆ. ನಾನು ಹಂದಿ ಮಾಂಸ ತಿನ್ನಲ್ಲ ಎಂದು ಸ್ಪಷ್ಟನೆ ನೀಡಿದರು.
ದೇವಸ್ಥಾನಕ್ಕೆ ಬರೋರನ್ನ ಏನ್ ತಿಂದಿದ್ದೀರಾ ಅಂತ ಕೇಳ್ತಾರಾ, ಇಲ್ಲಾಂದ್ರೆ ಯಾರಾದ್ರೂ ಚೆಕ್ ಮಾಡ್ತಾರಾ, ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಿದ್ದಾರಾ ಇಲ್ವಾ ಅಂತ ಗೊತ್ತಾಗುತ್ತಿದೇಯಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಕೊಡಗು ಬಸವೇಶ್ವರ ದೇವಸ್ಥಾನಕ್ಕೆ ನಾನ್ ವೆಜ್ ತಿಂದು ಹೋಗಿಲ್ಲ. ಸುಮ್ನೆ ಚರ್ಚೆಗೆ ನಾನು ಅವತ್ತು ಹೇಳಿದ್ದೆ, ಬಿಜೆಪಿಗೆ ನನ್ನ ಕಂಡ್ರೆ ಭಯ ಅದಕ್ಕೆ ಮಾತಾಡುತ್ತಾರೆ. ಹಂದಿ ಮಾಂಸನಾ ಬಿಜೆಪಿಯವರಿಗೆ ತಿನ್ನೋದಕ್ಕೆ ಹೇಳಿ
ಹಂದಿ ತಿನ್ನೋರಿಗೆ ನಾನು ವಿರೋಧವೂ ಇಲ್ಲ. ನಾನು ಇನ್ನೊಬ್ಬರ ತಿನ್ನುವ ಆಹಾರಕ್ಕೆ ಕೈ ಹಾಕೋದಕ್ಕೆ ಹೋಗಲ್ಲ, ಹೋಗಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.