Wednesday, October 30, 2024

ಕಿಡ್ನ್ಯಾಪ್ ಆಗಿದ್ದ ಬಾಲಕ ಗೋವಾದಲ್ಲಿ ಪತ್ತೆ..!

ಕಾರವಾರ : ಉತ್ತರಕನ್ನಡ ಜಿಲ್ಲೆಯ ಭಟ್ಕಳ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆಗಿಳಿದ ಭಟ್ಕಳ ನಗರ ಠಾಣೆ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಕಾರೊಂದರಲ್ಲಿ ಅಪಹರಣಕಾರರು ಬ್ರೆಡ್ ತರಲು ಹೋಗಿದ್ದ ಅಲಿಸಾದ್​ನನ್ನು ಅಪಹರಿಸಿದ್ದರು. ಈ ದೃಶ್ಯದ ಬೆನ್ನು ಬಿದ್ದ ಪೊಲೀಸರಿಗೆ ಕಾರಿನ ಜಾಡು ಸಿಕ್ಕಿದೆ. ಕಾರಿನ ಕಿಡ್ನ್ಯಾಪ್ ಮಾಡಿದ್ದ ಕಾರು ಗೋವಾ ಮಾರ್ಗಕ್ಕೆ ಸಮೀಪದಲ್ಲಿ ಪತ್ತೆಯಾಗಿತ್ತು. ಕೂಡಲೇ ದಾಳಿ ಮಾಡಿದಾಗ ಗೋವಾದ ಕಲಂಗೂಟ್‌ನ ಮನೆಯೊಂದರಲ್ಲಿದ್ದ ಬಾಲಕನನ್ನು ರಕ್ಷಣೆ ಮಾಡಿ ಆರೋಪಿ ಅನೀಸ್ ಭಾಷಾ(29) ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ನಾಲ್ವರಿಗಾಗಿ ಶೋಧ ಮಾಡುತ್ತಿದ್ದಾರೆ.

ಹಣಕಾಸು ವಿಚಾರಕ್ಕಾಗಿ ಬಾಲಕನ ಅಜ್ಜನೇ ಕಿಡ್ನ್ಯಾಪ್ ಮಾಡಿಸಿದ್ದಾಗಿ ಬಂಧಿತ ಆರೋಪಿ ಬಾಯಿ ಬಿಟ್ಟಿದ್ದಾನೆ. ಬಾಲಕನ ತಾಯಿಯ, ತಾಯಿ ಸಹೋದರ ಸೌದಿ ಅರೇಬಿಯಾದಲ್ಲಿರುವ ಇನಾಯತ್ ಉಲ್ಲಾ ಎಂಬಾತನಿಂದ ಬಾಲಕನ ಕುಟುಂಬಸ್ಥರು ಸಾಲ ಪಡೆದಿದ್ದರು ಎನ್ನಲಾಗಿದ್ದು, ಅದನ್ನು ವಾಪಸ್ ನೀಡುವಂತೆ ಪೀಡಿಸುತ್ತಿದ್ದ ಇನಾಯತ್ ಉಲ್ಲಾ, ಕುಟುಂಬಸ್ಥರಿಗೆ ಬೆದರಿಕೆ ಒಡ್ಡುವ ಉದ್ದೇಶದಿಂದಲೇ ಅಪಹರಣ ಮಾಡಿಸಿದ್ದಾನೆ ಎನ್ನಲಾಗಿದೆ.

ಒಟ್ಟಾರೆ ಒಂದೇ ದಿನದಲ್ಲಿ ಪೊಲೀಸರು ಪ್ರಕರಣ ಭೇದಿಸಿ ಬಾಲಕನನ್ನು ರಕ್ಷಿಸಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES