ಬೆಂಗಳೂರು : ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದು, ಇವರ ಅಗಲಿಕೆಗೆ ಸಿಎಂ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಆತ್ಮೀಯ ಕಿರಿಯ ಮಿತ್ರ, ಕಳೆದ ಹಲವಾರು ವರ್ಷಗಳಿಂದ ನನ್ನ ಜೊತೆ ಒಡನಾಟ ಹೊಂದಿ, ನನ್ನ ಮಾಧ್ಯಮ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಗುರುಲಿಂಗಸ್ವಾಮಿ ಹೊಳಿಮಠ ಅವರು ಇಂದು ಅಕಾಲಿಕ ನಿಧನರಾದ ವಿಷಯ ತಿಳಿದು ತೀವ್ರ ಆಘಾತ ಹಾಗೂ ದುಃಖಿತನಾಗಿದ್ದೇನೆ ” ಎಂದು ದುಃಖತಪ್ತರಾಗಿದ್ದಾರೆ.
ಒಬ್ಬ ದಕ್ಷ ಹಾಗೂ ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಲವು ಸಾಧನೆಗೈದು ಇನ್ನೂ ಹೆಚ್ಚಿನದನ್ನು ಸಾಧಿಸಲು ಹಂಬಲ ಹೊಂದಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ. ಗುರುಲಿಂಗ ಸ್ವಾಮಿ ರಾಮದುರ್ಗದ ಹಳ್ಳಿಯವರು. ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡಿದ್ದರು.
ಪತ್ರಿಕಾ ದಿನದ ಆರಂಭದಿನದಿಂದ ನನಗೆ ಪರಿಚಯ. ಟಿ.ವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು. ಅತ್ಯಂತ ಕ್ರಿಯಾಶೀಲ ಪತ್ರಕರ್ತರಾಗಿದ್ದು, ವರದಿಯ ನಿಖರತೆ ಪಡೆದುಕೊಂಡು ಮುಂದುವರೆಯುವ ಜವಾಬ್ದಾರಿಯುತ ಪತ್ರಕರ್ತರಾಗಿದ್ದಾರೆ ಎಂದು ಹೇಳಿದ್ದಾರೆ.ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದರು. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದರು. ಪ್ರತೀ ದಿನ ಹಲವರಿಗೆ ಸಹಾಯ ಮಾಡುತ್ತಿದ್ದರು. ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡುತ್ತಿದ್ದರು. ಕ್ರಿಯಾ ಶೀಲರಾಗಿದ್ದರು ಎಂದು ಹೇಳಿದರು.
ನಿನ್ನೆ ಎಂಟು ಗಂಟೆಗೆ ಮನೆಗೆ ಹೋಗುತ್ತೇನೆ ಅಂದಿದ್ದರು. ಬೆಳಗ್ಗೆ ಎದ್ದು ಇಂತಹ ಸುದ್ದಿ ಬರುತ್ತೆ ಅಂತ ಅನಿಸಿರಲಿಲ್ಲ. ಇದು ದುಃಖಕರ ಸಂಗತಿ. ನಾಗರಾಜ್ ಜಮಖಂಡಿ ಜೊತೆ ಜೊತೆಯಲ್ಲೇ ಇವನು ಹೋದ. ಪ್ರತೀ ವರ್ಷ ಜಮಖಂಡಿ ಅವರ ಕಾರ್ಯಕ್ರಮ ಇವನೇ ನಿಂತು ಮಾಡುತ್ತಿದ್ದರು. ಅವನ ಕ್ರಿಯಾಶೀಲ ಇತರರಿಗೂ ಮಾದರಿಯಾಗಲಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.