ಬೆಂಗಳೂರು : ವಿಧಾನಸಭಾ ಕಲಾಪದಲ್ಲಿ ಪವರ್ ಟಿವಿ ವರದಿ ಪ್ರಸ್ತಾಪವಾಗಿದೆ. ಸಚಿವ ಹೆಚ್.ಡಿ ರೇವಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದನ್ನು ಸ್ವತಃ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರಸ್ತಾಪಿದರು.
ಸಿಎಂ ಕುಮಾರಸ್ವಾಮಿ ಅವರು ರಿಲೀಸ್ ಮಾಡಿದ್ದ ಬಿಎಸ್ವೈ ಆಡಿಯೋ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಿತು. ಇಡೀ ದಿನದ ಕಲಾಪ ಇದೇ ವಿಚಾರದಲ್ಲಿ ಮುಗಿದು ಹೋಯಿತು. ಈ ದಿನದ ಕಲಾಪದ ಕೊನೆಯಲ್ಲಿ ಶಾಸಕ ರೇಣುಕಾಚಾರ್ಯ, ‘ರೇವಣ್ಣ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದು’ ಏಕೆ ಅಂತ ಪ್ರಶ್ನೆ ಮಾಡಿದ್ರು.
ರೇವಣ್ಣ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದನ್ನು ಪವರ್ ಟಿವಿ ವರದಿ ಮಾಡಿತ್ತು. ಆದರೆ, ರೇವಣ್ಣ ‘ನಂಗೆ ಯಡಿಯೂರಪ್ಪ ಅವರ ಮನೆ ಎಲ್ಲಿದೆ ಅಂತಲೇ ಗೊತ್ತಿಲ್ಲ. ನಾನ್ಯಾಕೆ ಅಲ್ಲಿಗೆ ಹೋಗಲಿ ಅಂತ ಎರೆಡೆರಡು ಬಾರಿ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡೋ ಪ್ರಯತ್ನ ಮಾಡಿದ್ರು . ಪವರ್ ಟಿವಿ ಆರಂಭದಲ್ಲೇ ಹೇಳಿಕೊಂಡಂತೆ ಸತ್ಯಕ್ಕೆ ದೂರವಾದ ಸುದ್ದಿಯಲ್ಲಿ ಈ ಕ್ಷಣದವರೆಗೂ ಮಾಡಿಲ್ಲ. ಮುಂದೆ ಮಾಡೋದೂ ಇಲ್ಲ. ಅಂತೆಯೇ ರೇವಣ್ಣ-ಬಿಎಸ್ವೈ ಭೇಟಿಯ ವರದಿಯೂ ಖಚಿತವಾಗಿತ್ತು ಅನ್ನೋದನ್ನು ಸ್ಮರಿಸಬಹುದು.
ಬಿಎಸ್ವೈ ಮನೆಗೆ ರೇವಣ್ಣ ಭೇಟಿ ನೀಡಿದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ರೇಣುಕಾಚಾರ್ಯ ಬಳಿಕ ಪವರ್ ಟಿವಿ ಜೊತೆಯೂ ಮಾತಾಡಿದ್ರು. ರೇವಣ್ಣಗೆ ಉಪಮುಖ್ಯಮಂತ್ರಿ ಆಗೋ ಆಸೆ ಇದೆ. ಅವರಿಗೆ ಕಾಂಗ್ರೆಸ್ ಯಾವತ್ತಿದ್ರೂ ‘ಕೈ’ ಕೊಡುತ್ತೆ ಅನ್ನೋ ಭಯ ಇದೆ. ಅದಕ್ಕಾಗಿಯೇ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದು ಎಂದರು.
ಸದನದಲ್ಲಿ ಪವರ್ ಟಿವಿ ವರದಿ ಪ್ರಸ್ತಾಪ – ಬಿಎಸ್ವೈ ಮನೆಗೆ ರೇವಣ್ಣ ಹೋಗಿದ್ದೇಕೆ ಅಂತ ಕೇಳಿದ್ರು ರೇಣುಕಾಚಾರ್ಯ..!
TRENDING ARTICLES