ಬೆಂಗಳೂರು : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿ ಮಾಡಿರುವ ಬಿಎಂಟಿಸಿ ಬಸ್ಗಳ ಸಂಖ್ಯೆ ಹೆಚ್ಚಳವಾದ ಕಾರಣದಿಂದ ಚಾಲಕರಿಗೆ ನಿಗಮ ದಿಂದ ಗೇಟ್ ಪಾಸ್ ನೀಡಲಾಗಿದೆ.
ಡ್ರೈವರ್ಗಳಿಗೆ ಶಾಕ್ ನೀಡೋಕೆ ಎಲೆಕ್ಟ್ರಿಕ್ ಬಸ್ಗಳು ಬೀದಿಗಿಳಿಯುತ್ತಿದ್ದು, 921 ಎಲೆಕ್ಟ್ರಿಕ್ ಬಸ್ ಗಳ ಖರೀದಿಯಿಂದ ಡ್ರೈವರ್ ಗಳ ಕೆಲಸಕ್ಕೆ ಕುತ್ತು ಬಂದಿದೆ. ಡ್ರೈವರ್ಗಳ ಪಾಲಿಗೆ ಕಂಟಕ ಆಗೇ ಬಿಡ್ತಾ ಎಲೆಕ್ಟ್ರಿಕ್ ಬಸ್..,? ಎಲೆಕ್ಟ್ರಿಕ್ ಬಸ್ಗಳಿಗೆ ಖಾಸಗಿ ಸಂಸ್ಥೆ ಡ್ರೈವರ್ಗಳೇ ನೇಮಕಗೊಂಡಿದ್ದಾರೆ. ಹೀಗಾಗಿ ಮತ್ತೆ ಎಲೆಕ್ಟ್ರಿಕ್ ಬಸ್ಗಳ ಖರೀದಿಯಿಂದ ಡ್ರೈವರ್ಗಳ ಕೆಲಸ ಕೆಳೆದುಕೊಳ್ಳುವ ಭೀತಿ ಎದುರಾಗಿದೆ.
ಇನ್ನು, ಮೊದಲು ಹಾಗೂ ಎರಡನೇ ಬ್ಯಾಚ್ನಲ್ಲಿ ಖರೀದಿ ಮಾಡಿರೋ ಬಸ್ಗಳಿಗೆ ಕಂಡಕ್ಟರ್ ಮಾತ್ರ ಬಿಎಂಟಿಸಿಯವರು ಡ್ರೈವರ್ ಖಾಸಗಿಯವರಾಗಿದ್ದು, ಇದೀಗ ಮೂರನೇ ಹಂತದಲ್ಲಿ ಬರಲಿರೋ 921 ಬಸ್ಗಳಿಗೂ ಖಾಸಗಿಯವರೇ ಡ್ರೈವರ್ಗಳು ನೇಮಕಗೊಂಡಿದ್ದಾರೆ.
ಬಿಎಂಟಿಸಿ ಒಳಗೆ ಎಲೆಕ್ಟ್ರಿಕ್ ಬಸ್ಗಳ ಮೂಲಕ ಖಾಸಗೀಕರಣದ ಭೂತವನ್ನು ಬಿಟ್ಟ ಸರ್ಕಾರ ಎಲೆಕ್ಟ್ರಿಕಲ್ ಬಸ್ಗಳನ್ನು ರಸ್ತೆಗಿಳಿಸೋದ್ರ ಮೂಲಕ ಖಾಸಗೀಕರಣ ಎಂಟ್ರಿಕೊಟ್ಟಿದೆ. ಬಿಎಂಟಿಸಿಯೊಳಗೆ ಖಾಸಗೀಕರಣದಿಂದ ಡ್ರೈವರ್ಗಳಿಗೆ ಆಪತ್ತು ಬಂದಿದ್ದು, ಹಂತ ಹಂತವಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳು ಡ್ರೈವರ್ಗಳ ಕೆಲಸ ಕಿತ್ತುಕೊಳ್ತಿವೆ.