ಬೆಂಗಳೂರು : ಕಾಂಗ್ರೆಸ್, ಬಿಜೆಪಿ ಮಧ್ಯೆ ತಾರಕಕ್ಕೇರಿದ ಮೊಟ್ಟೆ ವಾರ್ ಕಾಂಗ್ರೆಸ್ ಹೋರಾಟ ಹತ್ತಿಕ್ಕಲು ಬಿಜೆಪಿ ಪ್ಲ್ಯಾನ್ ಮಾಡಿದೆ.
ಕಾಂಗ್ರೆಸ್ ಹೋರಾಟ ಯಶಸ್ವಿಯಾದ್ರೆ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ ಇದ್ದು, ಬಿಜೆಪಿಯಿಂದಲೂ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್ 26ರಂದು ಕಾಂಗ್ರೆಸ್, ಬಿಜೆಪಿ ಶಕ್ತಿ ಪ್ರದರ್ಶನ ತೋರಿಸಲಿದ್ದು, ಮಡಿಕೇರಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ಇನ್ನು, ಕಾಂಗ್ರೆಸ್ ಹೋರಾಟಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಂದೇ ದಿನ ಎರಡು ಕಾರ್ಯಕ್ರಮ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡೋದು ಕಷ್ಟ. ಕೊಡಗು ಸೂಕ್ಷ್ಮ ಪ್ರದೇಶವಾದ್ದರಿಂದ ಜಟಾಪಟಿ ಆಗಬಹುದು. ಹೀಗಾಗಿ ಸೆಕ್ಷನ್ 144 ಹಾಕಿ ಕಾಂಗ್ರೆಸ್ ಹೋರಾಟ ಹತ್ತಿಕ್ಕುವ ಸಾಧ್ಯತೆ ಇದೆ.