ಬೆಂಗಳೂರು: ಕನ್ನಡ ಕಿರುತೆರೆಯಿಂದ 2 ವರ್ಷ ನಿಷೇಧ ಮಾಡಿರೋ ಹಿನ್ನೆಲೆ ಮತ್ತೊಮ್ಮೆ ಇಂದು ನಟ ಅನಿರುದ್ಧ್ ಸುದ್ದಿ ಗೋಷ್ಠಿ ನಡೆಸಿದರು.
ನನ್ನ ಹತ್ತಿರ ಕೋಪ ಇದೆ ಎಂದಾದರೂ ದುರಹಂಕಾರ ಇರೋದು ನೋಡಿದ್ದೀರಾ. ನಾಳೆನೂ ಕೋಪಿಸ್ಕೋತಿನಿ. ಕ್ರಿಯೇಟಿವ್ ಪ್ರೊಸೆಸ್ ಇಂದ ಸರಿ ಮಾಡ್ಕೊಂಡು ಇರಬೇಕು. ಅವರು ಮಾಡಿದ ಪ್ರೆಸ್ ಮೀಟ್ಲಿ ಕೆಲವೊಬ್ಬರನ್ನು ನೋಡೆ ಇಲ್ಲ. ಹಿಂದೆ ಕೂಡ ಕೋಪ ಮಾಡ್ಕೊಂಡಿದಿನಿ. ಅದಕ್ಕೆ ಅರ್ಥ ಇದೆ. ನನ್ನಲ್ಲಿ ಸ್ಟಾರ್ ಆಟ್ಟಿಟ್ಯುಡ್ ಇದ್ದಿದ್ರೆ. ಈ ರೀತಿ ಮಾಡ್ತಾ ಇರಲಿಲ್ಲ ಎಂದು ಸಮಜಾಯಿಸಿ ಉತ್ತರ ನೀಡಿದರು.
ಬಹಳಷ್ಟು ಜನ ಕರೆ ಮಾಡಿ ಹೇಳಿದ್ದಾರೆ. ನಿಮ್ಮ ಯಶಸ್ಸು ಬಯಸ್ತೀವಿ ಅಂತಾ. 25 ಲೇಖನಗಳನ್ನು ಬರೆದಿದ್ದೆನೆ. ಅದು ನನ್ನ ಯಶಸ್ಸು. ಯಶಸ್ಸು ಇದು ಹೊಸದಲ್ಲ. ಇನ್ಸೆಕ್ಯೂರಿಟಿ ಬಗ್ಗೆ ಮಾತಾಡ್ತೀರಿ ನನ್ನ ಲೇಖನಗಳನ್ನು ಓದಿ. ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ.
ಅಭಿನಯ ಒಂದೇ ಅಲ್ಲ ನಂಗೆ. ಅಭಿನಯ ಇಷ್ಟ ಪಡೋರಿಗೆ ಎಲ್ಲಾದ್ರೂ ಇನ್ಸೆಕ್ಯೂರಿಟಿ ಬರೋಕೆ ಸಾಧ್ಯನಾ. ನನ್ನ ಸಹ ಕಲಾವಿದರಿಗೆ ಕೇಳಿ ನಾನೇನು ಅಂತಾ. ಮಾದ್ಯಮದ ಮುಂದೆ ಆರೋಪ ಮಾಡುವ ಬದಲು ನನ್ನ ಬಳಿ ಮಾತನಾಡಬಹುದಿತ್ತು ಎಂದರು.
ಕ್ಯಾರಾವಾನ್ ಕೇಳೋಕೆ ಹುಚ್ಚ ಅಲ್ಲ ನಾನು. ಕಿರುತೆರೆ ಸಂಘದ ಅಧ್ಯಕ್ಷ ಭಾಸ್ಕರ್ ಅವರನ್ನ ನಾನು ನೋಡೆ ಇಲ್ಲ. ಹೋರಾಟ, ಸಂಘರ್ಷ ನನಗೆ ಹೊಸದಲ್ಲ. ಸ್ಮಾರಕಕ್ಕೆ ಹೋರಾಟ ತುಂಬಾ ಮಾಡಿದಿನಿ. ಟಿಆರ್ಪಿ ಅಂದ್ರೆ ನಂಗೆ ಗೊತ್ತು ನಾನು ಓದಿದಿನಿ. ನೇಮು, ಫೇಮು ಮೊದಲಿನಿಂದ ಇದೆ ಎಂದು ಅನಿರುದ್ಧ್ ಹೇಳಿದರು.