ಚಿಕ್ಕಬಳ್ಳಾಪುರ: ಕೊಡಗಿನ ಸುದರ್ಶನ್ ಗೆಸ್ಟ್ ಹೌಸ್ ನಲ್ಲಿ ನಾನು ನಾನ್ ವೆಜ್ ಊಟ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ನಾನು ಬಸವೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪಾ. ನಾನ್ ವೆಜ್ ರಾತ್ರಿ ತಿಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುತ್ತಾರಲ್ಲ ಎಂದು ಈ ವೇಳೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನನ್ನ ಊಟದ ಬಗ್ಗೆ ಪ್ರಶ್ನಿಸಲು ಇವರ್ಯಾರು. ಜನರ ಕಷ್ಟಗಳಿಗ ಸ್ಪಂದಿಸಲು ಕೊಡಗಿಗೆ ಹೋಗುತ್ತಿದ್ದೇನೆ. ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರ ತಪ್ಪುಗಳನ್ನು ಮುಚ್ಚಿಡಲು ನಮ್ಮ ವಿರುದ್ಧ ಈ ರೀತಿಯ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ.
ಟಿಪ್ಪು ವನ್ನು ಬಿಜೆಪಿಯವರು ಈಗ ವಿರೋಧ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರು ಟಿಪ್ಪು ವೇಷ ಭೂಷಣ ಧರಿಸಿದ್ದು ಏಕೆ. ಅಶೋಕ, ಶೆಟ್ಟರ್, ಯಡಿಯೂರಪ್ಪ, ಶೋಭ ಕರಂದ್ಲಾಜೆ ಸೇರಿ ಬಿಜೆಪಿ ನಾಯಕರು ಬೆಂಬಲಿಸಿದ್ದು ಯಾಕೆ. ಟಿಪ್ಪು ಪುಸ್ತಕಕ್ಕೆ ಯಡಿಯೂರಪ್ಪ ಅವರೇ ಮುನ್ನಡಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದರು.