ದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ (ಕೇಂದ್ರ ತನಿಖಾ ದಳ) ಅಧಿಕಾರಿಗಳು ಇಂದು ದಾಳಿ ನಡೆಸಿದೆ.
ಹೊಸ ಅಬಕಾರಿ ನೀತಿ ಕೇಸಿನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ಸಿಸೋಡಿಯಾ, ಸಿಬಿಐ ಅಧಿಕಾರಿಗಳು ಇಲ್ಲಿ ನನ್ನ ಮನೆಯಲ್ಲಿದ್ದಾರೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ. ಅವರಿಗೆ ನನ್ನ ವಿರುದ್ಧ ಏನೂ ಸಾಕ್ಷಿಗಳು ಸಿಗುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.
ಮುಂದುವರೆದು ಭಾಗವಾಗಿ ಟ್ವೀಟ್ ಮಾಡಿ, ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ದಾಳಿಗಳು, ತೊಂದರೆಯಾಗುತ್ತಲೇ ಇರುತ್ತದೆ. ತನಿಖಾ ಸಂಸ್ಥೆಯು ಎಫ್‌ಐಆರ್ ದಾಖಲಿಸಿದೆ. ನವೆಂಬರ್‌ನಲ್ಲಿ ದೆಹಲಿ ಅಬಕಾರಿ ನೀತಿಯನ್ನು ಪ್ರಾರಂಭಿಸಿದೆ. ಅದರ ಅಡಿಯಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿದೆ ಎಂದು ತನಿಖೆ ನಡೆಸುತ್ತಿದೆ.
CBI raids underway at the residence of Delhi Deputy CM Manish Sisodia. pic.twitter.com/vzzu7e0FGJ
— ANI (@ANI) August 19, 2022