Monday, November 18, 2024

ಗ್ರಾಮೀಣ ಮಹಿಳೆಗೆ ಒಲಿದು ಬಂದ ಜಾನಪದ ಅಕಾಡೆಮಿ ಪ್ರಶಸ್ತಿ.!

ಕಾರವಾರ: ಕರ್ನಾಟಕ ಜಾನಪದ ಅಕಾಡೆಮಿಯು 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಿದೆ. ಅದರಂತೆ ಜಿಲ್ಲೆಯ ಹೊನ್ನಾವರದ ಗ್ರಾಮೀಣ ಮಹಿಳೆಗೆ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ನಾನಾ ಜಿಲ್ಲೆಗಳಿಂದ ಒಟ್ಟು 30 ಜಾನಪದ ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಮತ್ತು ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಹೊನ್ನಾವರ ತಾಲೂಕಿನ ಬೈಲೂರಿನ ಶಾರದ ಮಹಾದೇವ ಮೊಗೇರಗೆ ಪ್ರಶಸ್ತಿ ಒದಗಿಬಂದಿದೆ.

ಕಳೆದ ಐದಾರು ದಶಕಗಳಿಂದ ಜಾನಪದ ಹಾಡುಗಳನ್ನ ಹಾಡುವ ಮೂಲಕ ಶಾರದ ಮೊಗೇರ ಜಾಗೃತಿ ಮೂಡಿಸಿದ್ದರು. ಮದುವೆ ಪದಗಳು, ಜೋಗುಳ ಪದಗಳು, ಸೋಬಾನೆ ಹಾಡುವ ಶಾರದ ಮೊಗೇರ.
ಗ್ರಾಮೀಣ ಪ್ರತಿಭೆ ಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.

RELATED ARTICLES

Related Articles

TRENDING ARTICLES