ಬೆಂಗಳೂರು : ಯಡಿಯೂರಪ್ಪಗೆ 75 ವರ್ಷ ಆಗಿದೆ ಅಂತ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಇವಾಗ ಮತ್ತೆ ಅವರಿಗೆ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಸ್ಥಾನ ನೀಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಇವಾಗ ಪ್ರೀತಿ ಬಂದಿದೇನಾ ಯಡಿಯೂರಪ್ಪ ಅವರ ಮೇಲೆ..? ಬಿಜೆಪಿಯಲ್ಲಿನ ಕೆಲವು ಬೆಳವಣಿಗೆ ನಡೆದಿದೆ. ಮಾಧುಸ್ವಾಮಿ ಹೇಳಿಕೆ ಇಂದ ಬಿಜೆಪಿಗೆ ಆಘಾತ ಆಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ಆಘಾತ ಆಗಿದೆ ಹಾಗಾಗಿ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಯಡಿಯೂರಪ್ಪ ಅವರನ್ನು ಈ ಹುದ್ದೆ ನೀಡಿದ್ದಾರೆ ಎಂದರು.
ಇನ್ನು, ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ಸರ್ಕಾರ ಯಾಕೆ ಯುಸ್ ಆಂಡ್ ಥ್ರೋ ಮಾಡ್ತಿದೆ. ಯಡಿಯೂರಪ್ಪ ಅವನ್ನು ಉಪಯೋಗಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಈ ರೀತಿ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರ ಮೇಲೆ ಅಷ್ಟೋಂದು ಪ್ರೀತಿ ಇದ್ರೆ ಘೋಷಣೆ ಮಾಡಲಿ ಬಿಎಸ್ವೈ ಅವ್ರಿಗೆ ಮುಂದೆ ಸಿಎಂ ಮಾಡ್ತಿವಿ. ಬಿಜೆಪಿ ಹೈಕಮಾಂಡ್ ನಾಯಕರಿಗೆ ಬಿಎಸ್ವೈ ಮಹತ್ವ ಇವಾಗ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರ ಮುಂದೆ ಇಡುತೇನೆ ಎಂದರು.
ಅದಲ್ಲದೇ, ನಾನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗಾಗಿ ಪಕ್ಷದ ಪ್ರಚಾರ ಮಾಡುವುದ ನನ್ನ ಜವಾಬ್ದಾರಿ. ಕಾಂಗ್ರೆಸ್ ಸರ್ಕಾರದ ಸಾಧನೆ ಜೋತೆಗೆ ಬಿಜೆಪಿ ಸರ್ಕಾರದ ವೈಫಲ್ಯ ಜನರ ಮುಂದೆ ಇಡಬೇಕು. ಬಿಜೆಪಿ ಸರ್ಕಾರ 40% ಕಮಿಷನ್ ಹಾಗೂ ಮಾಧುಸ್ವಾಮಿ ಹೇಳಿಕೆ ಇದೆಲ್ಲವನ್ನು ನಾನು ಜನರ ಮುಂದೆ ಇಡುತೇನೆ ಇದೇ ನನ್ನ ಕೆಲಸ ಎಂದು ಹೇಳಿದರು.