ಬೆಂಗಳೂರು : ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೊರ್ಟ್ ನಡೆಸಿತು.ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠದಲ್ಲಿ ನಡೆದ ಅರ್ಜಿಯ ವಿಚಾರಣೆಯ ವೇಳೆ ಚುನಾವಣಾ ಆಯೋಗದ ಪರ ಕೆ.ಎನ್. ಫಣೀಂದ್ರ ವಾದವನ್ನು ಮಂಡಿಸಿದರು.ಸೆ.22ರೊಳಗೆ ಮತದಾರರ ಪಟ್ಟಿ ಅಂತಿಮವಾಗಲಿದೆ. ಸೆ.22ರ ಬಳಿಕ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಸಹ ಪ್ರಾರಂಭವಾಗಲಿದೆ.
ಸುಪ್ರೀಂಕೋರ್ಟ್ ಶೀಘ್ರ ಚುನಾವಣೆಯನ್ನು ನಡೆಸಲು ಸೂಚನೆ ನೀಡಿದೆ.ಅರ್ಜಿದಾರರದ್ದು ಆಕ್ಷೇಪಣೆಗಳಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಿ ಎಂದು ವಾದಿಸಿದ್ದು, ಅರ್ಜಿದಾರರು ಸುಪ್ರೀಂಕೋರ್ಟ್‌ನಿಂದಲೇ ಸ್ಪಷ್ಟನೆ ಪಡೆಯುವುದು ಸೂಕ್ತ ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮಂಗಳವಾರವಷ್ಟೇ ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ವಾರ್ಡ್ ಪುನರ್ ವಿಂಗಡಣೆಗೆ ತಡೆ ನೀಡಲು ಅರ್ಜಿದಾರರ ಪರ ವಕೀಲರು ಮನವಿಯನ್ನು ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಪೀಠ ಸರ್ಕಾರ ಎಲ್ಲವನ್ನೂ ತರಾತುರಿಯಲ್ಲೇ ಮಾಡುತ್ತಿದೆ, ಸುಪ್ರೀಂನಿಂದಲೇ ಸ್ಪಷ್ಟನೆ ಪಡೆಯುವುದು ಸೂಕ್ತ ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮಧ್ಯಂತರ ಆದೇಶ ನೀಡಲು ಕೋರ್ಟ್ ನಿರಾಕರಿಸಿದೆ. ಹೀಗಾಗಿ ಅರ್ಜಿದಾರರು ಇದೆಲ್ಲವೂ ಬಿಜೆಪಿ ಶಾಸಕರ ಕುತಂತ್ರ. ಡೀ ಲಿಮಿಟೇಷನ್ ನಲ್ಲೂ ನ್ಯಾಯ ಸಿಕ್ಕಿಲ್ಲ. ರಿಸರ್ವೇಷನ್ ನಲ್ಲೂ ತಾರತಮ್ಯ ಆಗಿದೆ. ಇದ್ರಿಂದ ಅಧಿಕಾರಿಗಳು ಹಾವು ಏಣಿ ಆಟ ಆಡಿದ್ದಾರೆ. ಆದ್ರೂ 29ರವರೆಗೂ ಕಾದು ನೋಡ್ತೇವೆ ಅಂತ ದೂರುದಾರ ನಾಗರಾಜ್ ಅಸಮಾಧಾನ ಹೊರ ಹಾಕಿದ್ದಾರೆ.
ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಯ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ. ಅದೇನಾದ್ರು ನ್ಯಾಯಾಲಯಗಳು ಮಧ್ಯಪ್ರವೇಶ ಮಾಡದಿದ್ದರೆ ಬಿವಿಎಂಪಿ ಚುನಾವಣೆ ಶೀಘ್ರವೇ ನಡೆಯಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು