ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣೆಗೆ ಒದಗಿಸುವ ಎಸ್.ಪಿ.ಜಿ ಭದ್ರತೆಗೆ ರಾಜ್ಯದ ಬಾಗಲಕೋಟಿ ಜಿಲ್ಲೆಯ ಮುಧೋಳ ನಾಯಿಗಳು ಸೇರ್ಪಡೆಯಾಗಿದ್ದಾವೆ.
ಏಪ್ರಿಲ್ 25ರಂದು ಎರಡು ಮುಧೋಳ ನಾಯಿ ಮರಿಗಳನ್ನು ಎಸ್.ಪಿ.ಜಿ ವೈದ್ಯರ ತಂಡ ಹಾಗೂ ಇಬ್ಬರು ಯೋಧರು ಬಂದು ಕೊಂಡೊಯ್ದಿದ್ದಾರೆ.
ಎರಡು ಗಂಡು ಜಾತಿಯ ಮುಧೋಳ ನಾಯಿ ಮರಿಗಳನ್ನ ಕೊಂಡೊಯ್ದಿದ್ದು, ಹೊಸದಿಲ್ಲಿಯಲ್ಲಿ ಮುಧೋಳ ನಾಯಿ ಮರಿಗಳಿಗೆ ಈಗ ತರಬೇತಿ ನಡೆಸುತ್ತಿವೆ. ಈಗಾಗಲೇ ಕೇರಳಕ್ಕೆ 9, ಕರ್ನಾಟಕ ಪೋಲಿಸ ಪಡೆ, ಬಿಎಸ್ಎಪ್ ಹಾಗೂ ಸೇನೆಗೆ ಮುಧೋಳ ನಾಯಿಗಳು ಸೇರಿದ್ದಾವೆ.
ಸದ್ಯ ತಿಮ್ಮಾಪೂರದ ಮುಧೋಳ ನಾಯಿ ತಳಿ ಸಂವರ್ಧನೆ ಕೇಂದ್ರದಿಂದ ನಾಯಿ ಮರಿಗಳನ್ನ ಕೊಂಡೊಯ್ದಿದ್ದು, ಮುಂದಿನ ಹಂತಗಳಲ್ಲಿ ಮತ್ತಷ್ಟು ಕೊಂಡೊಯ್ಯಲಾಗುತ್ತದೆ ಎಂದಿದ್ದಾರೆ ಎಂದರು.