Monday, October 28, 2024

ಬೆಂಗಳೂರಿನಲ್ಲಿ ಟೋಯಿಂಗ್ ಮಾಫಿಯಾಕ್ಕೆ ಕಂಪ್ಲೀಟ್​ ಕಡಿವಾಣ ಬಿತ್ತಾ…?

ಬೆಂಗಳೂರು : ರಾಜಧಾನಿಯಲ್ಲಿ ನಾಗರಿಕರ ಜೀವ ಹಿಂಡಿದ್ದ ಟೋಯಿಂಗ್ ಮಾಫಿಯಾಕ್ಕೆ ರಾಜ್ಯ ಸರಕಾರ ಅಂಕುಶ ನೀಡಿದ್ದು, ಹಾಗಾದ್ರೆ ಇನ್ಮುಂದೆ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರಲ್ವಾ ಎಂದು ಕುತೂಹಲ ಮೂಡಿಸಿದೆ.

ಕಂಪ್ಲೀಟ್ ಆಗಿ ಬೆಂಗಳೂರಿನಲ್ಲಿ ಟೋಯಿಂಗ್ ರದ್ದು ಆಯ್ತಾ..? ಟೋಯಿಂಗ್​ಗೆ ಪರ್ಯಾಯವಾಗಿ ಬೇರೆ ಫ್ಲ್ಯಾನ್ ನಿರ್ಧಾರದಿಂದ ಹಿಂದೇ ಸರಿಯಿತಾ ಸರ್ಕಾರ..? ಕೊನೆಗೂ ಹೊಸ ಹಾಗೂ ಸರಳೀಕೃತ ಟೋಯಿಂಗ್ ವ್ಯವಸ್ಥೆ ಜಾರಿ ಮಾಡೇ ಇಲ್ಲ. ಜನಾಕ್ರೋಶಕ್ಕೆ ಮಣಿದು ಟೋಯಿಂಗ್ ವ್ಯವಸ್ಥೆಗೆ ಸಂಪೂರ್ಣ ತಿಲಾಂಜಲಿ ಆಡ್ತಾ ಪೊಲೀಸ್ ಇಲಾಖೆ.? ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು, ನಗರದಲ್ಲಿ ಸರಳೀಕೃತ ಟೋಯಿಂಗ್ ಮರೆತ ಸರ್ಕಾರ ಫೆಬ್ರವರಿಯಲ್ಲಿ 15 ದಿನದಲ್ಲಿ ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿ ಎಂದಿದ್ದ ಸಿಎಂ ಬೊಮ್ಮಾಯಿ. ಆದರೆ, ಆರು ತಿಂಗಳು ಕಳೆದರೂ ಬೆಂಗಳೂರಿನಲ್ಲಿ ಟೋಯಿಂಗ್ ಜಾರಿಯಾಗಿಲ್ಲ. ಹೀಗಾಗಿ ರಾಜಧಾನಿಯಲ್ಲಿ ಟೋಯಿಂಗ್​ಗೆ ತಿಲಾಂಜಲಿ ನೀಡಿದೆ.

ಅದಲ್ಲದೇ, ಟೋಯಿಂಗ್ ಉಪಟಳದಿಂದ ನಿಟ್ಟುಸಿರು ಬಿಟ್ಟ ನಗರದ ವಾಹನ ಸವಾರರು, ಎಎಸ್ಐ ಬೂಟಾಟಿಕೆಗೆ ಟೋಯಿಂಗ್ ಸ್ಥಗಿತಗೊಂಡಿದೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ರೆ ಹೆಚ್ಚುವರಿ ದಂಡ ರೂಲ್ಸ್ ಜಾರಿ ಮಾಡಿದೆ.

RELATED ARTICLES

Related Articles

TRENDING ARTICLES