ಉಡುಪಿ: ಜಿಲ್ಲೆಯ ಪುಟ್ಟ ಹುಡುಗಿಯೊಬ್ಬಳು ಹುಲಿವೇಷದವರ ಜತೆಗೆ ಸೇರಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಸ್ತೆಯಲ್ಲೇ ಸರ್ಕಲ್ ಹಾಕಿಕೊಂಡು ಹುಲಿ ವೇಷದವರು ಕುಣಿಯುತ್ತಿದ್ದಾಗ ಅವರ ಮಧ್ಯೆ ಹೋಗುವ ಪುಟ್ಟ ಬಾಲಕಿ ತನ್ನ ಪುಟಾಣಿ ಕಾಲುಗಳನ್ನು ಎತ್ತಿ ಹಾಕುತ್ತಾ ಹುಲಿವೇಷದ ನೃತ್ಯದ ತಾಳಕ್ಕೆ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯ ಬಹಳಷ್ಟು ಜನರ ಹೃದಯ ಗೆದ್ದಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ಹುಲಿ ವೇಷವೆಂಬ ಜನಪದ ನೃತ್ಯ ಬಹಳ ಪ್ರಸಿದ್ಧಿ ಪಡೆದಿದೆ. ಉಡುಪಿಯ ರಸ್ತೆ ಬೀದಿಯಲ್ಲಿ ಹುಲಿವೇಷದ ತಂಡದವರು ಹುಲಿವೇಷ ಪ್ರದರ್ಶನ ನೀಡುತ್ತಿದ್ದಾಗ ಮಹಿಳೆಯೊಬ್ಬರು ಹೋಗಿ ಹುಲಿವೇಷ ಕುಣಿಯುವವನಿಗೆ ಹಾರ ಹಾಕುತ್ತಾರೆ.
ಆಗ ಅಲ್ಲಿಗೆ ಬರುವ ಚಿಕ್ಕ ಹುಡುಗಿಯ ಕೈ ಹಿಡಿಯುವ ಹುಲಿವೇಷದವರು ಆಕೆಯನ್ನು ಮಧ್ಯೆ ನಿಲ್ಲಿಸಿ ನೃತ್ಯ ಮಾಡಲು ಶುರು ಮಾಡುತ್ತಾರೆ. ಆಗ ಅಚ್ಚರಿಯೆಂಬಂತೆ ಆ ಬೀಟ್ಗೆ ತಾನೂ ಹೆಜ್ಜೆ ಹಾಕುವ ಆ ಬಾಲಕಿ ಹುಲಿವೇಷದ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.