ಬೆಂಗಳೂರು : ತ್ರಿವರ್ಣ ಧ್ವಜ ಗಲಾಟೆ ಮುಗೀತು ಇದೀಗ ಗಣೇಶೋತ್ಸವ ಗಲಾಟೆ ತೀವ್ರ ಪಡೆಯುತ್ತಾ..? ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.
ಒಂದರ ಮೇಲೊಂದು ವಿವಾದ ಗಳ ಚಕ್ರಸುಳಿಯಲ್ಲಿ ಸಿಲುಕುತ್ತಿದೆ ಮೈದಾನ ಹಾಗಾದರೆ ಮೈದಾನ ವಿವಾದಗಳಿಂದ ಮುಕ್ತಿ ಕಾಣೋದು ಯಾವಾಗ..? ತ್ರಿವರ್ಣ ಧ್ವಜ ಗಲಾಟೆ ಮುಗೀತು ..ಇದೀಗ ಗಣೇಶೋತ್ಸವ ಗಲಾಟೆ ತೀವ್ರ ಪಡೆಯುತ್ತಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಚಾಮರಾಜಪೇಟೆ ಆಟದ ಮೈದಾನದಲ್ಲಿ ಮೊದಲ ಬಾರಿಗೆ ನಡೆಯುತ್ತಾ ಅದ್ದೂರಿ ಗಣೇಶೋತ್ಸವ..? ಈಗಾಗಲೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ನೆರವೇರಿಸಿರೋ ಕಂದಾಯ ಇಲಾಖೆ ಆದರೆ ಮೈದಾನದಲ್ಲಿ ಗಣೇಶೋತ್ಸವ ವಿವಾದಕ್ಕೆ ಬ್ರೇಕ್ ಇನ್ನೂ ಬಿದ್ದಿಲ್ಲ.
ಮೊದಲು ಸ್ವಾತಂತ್ರ್ಯ ದಿನಾಚರಣೆ, ಬಳಿಕ ಗಣೇಶೋತ್ಸವದ ಬಗ್ಗೆ ನಿರ್ಧಾರ ಮಾಡೋಣ ಅಂತಿರೋ ಕಂದಾಯ ಇಲಾಖೆ ಈಗಾಗಲೇ ಮೈದಾನದಲ್ಲಿ ಗಣಪನ ಕೂರಿಸೋಕೆ ತಕರಾರು ತೆಗೆದಿರುವ ಜಮೀರ್. ಆದರೆ ಚಾಮರಾಜಪೇಟೆ ನಾಗರಿಕರು ಹಾಗೂ ಹಿಂದೂಪರ ಸಂಘಟನೆಗಳು ಗಣಪತಿ ಕೂರಿಸೇ ಕೂರಿಸ್ತೀವಿ ಎಂದು ಪಟ್ಟು ಹಿಡಿದಿದ್ದಾರೆ. ಅನುಮತಿ ಸಿಕ್ಕಿಲ್ಲದಿದ್ದರೂ ಗಣೇಶೋತ್ಸವ ಮಾಡೋದು ಗೊತ್ತು ಎಂದು ಎಚ್ಚರಿಕೆ ನೀಡಿದ ನಾಗರಿಕರು ಸ್ವಾತಂತ್ರ್ಯ ಸಂಭ್ರಮ ಮಗಿಯುದ್ದಂತೆ ಮತ್ತೆ ಮೈದಾನದಲ್ಲಿ ಗಣೇಶ ವಿವಾದ ಸದ್ದು ಮಾಡುತ್ತಿದೆ.