ಬೆಂಗಳೂರು : ಅಬ್ಬಬ್ಬಾ. ಎಲ್ಲಿ ನೋಡಿದ್ರೂ ಜನರ ದಂಡು. ಅಪ್ಪು ಫೋಟೋ ಜೊತೆಗೆ ಸೆಲ್ಫಿ ತಗೋಳೋರಂತೂ ಕೇಳ್ಲೇ ಬೇಡಿ.. ಮತ್ತೊಂದೆಡೆ ಕಲರ್‌ಫುಲ್ ಫ್ಲವರ್ ಜೊತೆ ನಿಂತು ಫೋಸ್ ಕೊಡ್ತಿರೋ ಹುಡ್ಗೀರು. ಇದು ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಕಂಡು ಬಂದ ದೃಶ್ಯಗಳು.. 75ನೇ ಸ್ವಾತಂತ್ರ್ಯ ದಿನಾಚರಣೆ ಸಲುವಾಗಿ ಕೊವಿಡ್ ಬಳಿಕ ಈ ಬಾರಿ ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಕಳೆದ 9 ದಿನಗಳಿಂದಲೂ ನಿರಂತರವಾಗಿ ಜನರು ಲಾಲ್‌ಬಾಗ್‌ಗೆ ಬರ್ತಿದ್ದಾರೆ. ಜೊತೆಗೆ ಫ್ಲವರ್ ಶೋಗೆ ಕೊನೆ ದಿನ ಆಗಿರೋದ್ರಿಂದ ಸಸ್ಯ ಕಾಶಿಯಲ್ಲಿ ಹೆಚ್ಚು ಜನರು ಮುಂಜಾನೆಯಿಂದಲೇ ಬಂದಿದ್ರು.
ವೀಕೆಂಡ್ ಆಗಿರೋದ್ರಿಂದ ಬೆಂಗಳೂರಿನ ಹಲವೆಡೆಯಿಂದ ಜನರು ಫ್ಲವರ್ ಶೋ ನೋಡೋದಕ್ಕೆ ಬಂದಿದ್ರು. ಇಡೀ ಲಾಲ್‌ಬಾಗ್ ತುಂಬಾ ಜನಸಾಗರವೇ ತುಂಬಿತ್ತು. ಕಳೆದ 9 ದಿನದಲ್ಲಿ ಬರೋಬ್ಬರಿ 1 ಕೋಟಿ 60 ಲಕ್ಷ ಹಣ ಸಂಗ್ರಹವಾಗಿದೆ.
ಒಟ್ನಲ್ಲಿ ಎರಡು ವರ್ಷದಿಂದ ಫ್ಲವರ್ ಶೋವನ್ನು ಮಿಸ್ ಮಾಡಿಕೊಂಡಿದ್ದ ಬೆಂಗಳೂರಿನ ಜನರು, ಈ ಬಾರಿ ಫ್ಲವರ್ ಶೋವನ್ನು ಬಹಳ ಎಂಜಾಯ್ ಮಾಡ್ತಿದ್ದಾರೆ. ಫ್ಲವರ್ ಶೋಗೆ ತೆರೆ ಬೀಳ್ತಿರೋ ಕಾರಣದಿಂದ ಅಧಿಕವಾಗಿ ಜನರು ಬಂದು ಫ್ಲವರ್ ಶೋವನ್ನು ಕಣ್ತುಂಬಿಕೊಳ್ತಿದ್ದಾರೆ.
ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ, ಬೆಂಗಳೂರು