Tuesday, November 26, 2024

ದೇಶ ತುಂಡು ಮಾಡಿದ ಜವಾಹರಲಾಲ್ ನೆಹರು ಫೋಟೋ ಹಾಕಬೇಕಾ: ಈಶ್ವರಪ್ಪ ಪ್ರಶ್ನೆ

ಶಿವಮೊಗ್ಗ : ರಾಜ್ಯ ಬಿಜೆಪಿ ಸರ್ಕಾರದ ಜಾಹೀರಾತುವಿನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪೋಟೋ ಬಿಟ್ಟ ವಿಚಾರ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದ್ದಾರೆ.

ಹೌದು ಉದ್ದೇಶಪೂರ್ವಕವಾಗಿಯೇ ನೆಹರೂ ಪೋಟೋವನ್ನು ಹಾಕಿಲ್ಲ. ಇವರೆಲ್ಲ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದವರು. ನೆಹರೂ ಅಧಿಕಾರ ದಾಹಕ್ಕೆ ದೇಶವನ್ನು ತುಂಡು ಮಾಡಿದವರು. ತುಂಡು ಮಾಡಿದ ನೆಹರೂರವರನ್ನ ನಾವು ಯಾಕೆ ಮಹಾ ಪುರುಷ ಎಂದು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಅಧಿಕಾರದ ದಾಹಕೋಸ್ಕರ ದೇಶವನ್ನು ವಿಭಜನೆ ಮಾಡಿದ ನೆಹರೂರವರ ಫೋಟೋ ನಾವು ಹಾಕಬೇಕೆ. ಯಾವುದೇ ಕಾರಣಕ್ಕೂ ನೆಹರೂರವರ ಫೋಟೋ ಹಾಕಲ್ಲ.

ಎಸ್​ಡಿಪಿಐ ಕಾರ್ಯಕರ್ತ ವೀರ ಸಾವರ್ಕರ್ ಪೋಟೋ ತೆಗೆಸಿದ ವಿಚಾರ ಬಗ್ಗೆ ಮಾತನಾಡಿ, ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಕಲ್ವನೇ ಇಲ್ದೇ ಇರೋ ದೇಶ ದ್ರೋಹಿಗಳು ಪೋಟೋ ತೆಗೆಸುವ ಕೆಲಸ ಮಾಡಿದ್ದಾರೆ. ಪೊಲೀಸರು ಅವರನ್ನು ತಕ್ಷಣ ಅವರನ್ನು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

ನೋಡೋಣ ಅಂತಹ ರಾಷ್ಟ್ರ ದ್ರೋಹಿಗಳು ಶಿವಮೊಗ್ಗದಲ್ಲಿ, ರಾಜ್ಯದಲ್ಲಿ , ದೇಶದಲ್ಲಿ ಎಷ್ಷು ಜನ ಇರುತ್ತಾರೆ. ದೇಶದಲ್ಲಿ ಹನಿ ಹನಿ ರಕ್ತಕ್ಕೂ ಬೆಲೆ ಇದೆ. ಈ ದೇಶ ಅಖಂಡ ಭಾರತ ಆಗುತ್ತದೆ. ಸಾವರ್ಕರ್ ಬೆವರು ಸುರಿಸುವುದು ಸಾರ್ಥಕ ಆಗುತ್ತದೆ.

RELATED ARTICLES

Related Articles

TRENDING ARTICLES