Friday, November 22, 2024

ರಾಜಧಾನಿಯಲ್ಲಿ ರಾರಾಜಿಸಿದ ತಿರಂಗಾ ಅಭಿಯಾನ

ಬೆಂಗಳೂರು : ಎಲ್ಲೆಲ್ಲೂ ಹರ್ ಘರ್ ಕಾ ತಿರಂಗಾ ಅಭಿಯಾನ ಫುಲ್ ಜೋರಾಗಿತ್ತು. ರಾಷ್ಟ್ರೀಯ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಶನಿವಾರ ಬಹುತೇಕ ಕಡೆ ಅಮೃತ ಮಹೋತ್ಸವದ ಸಂಭ್ರಮಾಚರಣೆ ಮನೆ ಮಾಡಿತ್ತು. ಅದರಲ್ಲೂ ಕೂಡ ಬಹುತೇಕ ಶಾಲೆಯ ಮಕ್ಕಳು ತಿರಂಗ ಧ್ವಜವನ್ನು ಹಿಡಿದು ಮೆರವಣಿಗೆಯನ್ನು ಮಾಡಿದ್ರು. ನಗರದ ರಾಜರಾಜೇಶ್ವರಿ ಇಂಗ್ಲಿಷ್ ಹೈಸ್ಕೂಲ್‌ನ ವಿದ್ಯಾರ್ಥಿಗಳು ಮತ್ತೀಕೆರೆ, ಯಶವಂತಪುರ ಭಾಗಗಳಲ್ಲಿ ಮೆರವಣಿಗೆಯನ್ನು ನಡೆಸಿ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ರು. 1200 ವಿದ್ಯಾರ್ಥಿಗಳು ತಿರಂಗ ಧ್ವಜ ಹಿಡಿದು ಮೆರವಣಿಗೆಯನ್ನು ನಡೆಸಿ ದೇಶಭಕ್ತಿಯನ್ನು ಮೆರೆದರು.

ರಾಜ್ಯಧಾನಿಯ ಬಹುತೇಕ ಜನರು ನಮಗೆ ತಿರಂಗದ್ವಜ ಸಿಕ್ತಾ ಇಲ್ಲ ಮನೆ ಮೇಲೆ ಹಾರಿಸಲು ಸಾಧ್ಯ ಆಗ್ತಾಯಿಲ್ಲ ಅಂತ ಹೇಳುತ್ತಿದ್ದಾರೆ, ಹೀಗಾಗಿ ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್‌ನಲ್ಲಿ ಗ್ರಾಹಕರಿಗೆ ಉಚಿತವಾಗಿ ತಿರಂಗ ಧ್ವಜವನ್ನು ನೀಡಲಾಯಿತು. ಸುಮಾರು 150ಕ್ಕೂ ಹೆಚ್ಚು ಜನರಿಗೆ ಹೋಟೆಲ್ ವತಿಯಿಂದ ತಿರಂಗ ವಿತರಣೆ ಮಾಡುವ ಮೂಲಕ ದೇಶ ಭಕ್ತಿಯನ್ನು ಮೆರೆಯಲಾಗುತ್ತಿದೆ.

RELATED ARTICLES

Related Articles

TRENDING ARTICLES