ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯಂದು ಇಡೀ ಈದ್ಗಾ ಮೈದಾನ ಹಾಗೂ ಚಾಮರಾಜಪೇಟೆ ಸುತ್ತ ಪೊಲೀಸರ ಹದ್ದಿನ ಕಣ್ಣು ಇಟ್ಟಿದ್ದು, ಮಾಣಿಕ್ ಷಾ ಪೆರೇಡ್ ಮೈದಾನಕ್ಕಿಂತ ಹೆಚ್ಚಿನ ಭದ್ರತೆ ಕಲ್ಪಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಹಿನ್ನಲೆಯಲ್ಲಿ ಖಾಕಿ ಕಣ್ಗಾವಲಿನಲ್ಲಿ ಇರಲಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲೆಡೆ ಕಟ್ಟೇಚ್ಚರ ವಹಿಸಿದ್ದು, ಚಾಮರಾಜಪೇಟೆ ವ್ಯಾಪ್ತಿಯ ಪ್ರಮುಖ ಏರಿಯಾಗಳಲ್ಲಿ 3 km ರೂಟ್ ಮಾರ್ಚ್ ಮಾಡಿದ್ದು, ಸಿವಿಲ್ ಪೊಲೀಸರು ಹಾಗೂ ಸ್ವಾಟ್ ಪಡೆಯಿಂದ ಇಂದು ಪೆರೇಡ್ ನಡೆಯಲಿದೆ.
ಇನ್ನು, ಸುಮಾರು 500 ಕ್ಕೂ ಹೆಚ್ಚು ಪೊಲೀಸರಿಂದ ರೂಟ್ ಮಾರ್ಚ್ ನಡೆಯಲಿದ್ದು, ಇದೇ ವೇಳೆ ಕೇಂದ್ರದ ಅರೆಸೇನಾ ಪಡೆ ಕರೆಯಿಸಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಗೃಹ ಇಲಾಖೆ ಮೂಲಕ ಮನವಿ ಮಾಡಿರೋ ನಗರ ಪೊಲೀಸರು. ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.
ಅದಲ್ಲದೇ, ಅಗಸ್ಟ್ 13 ರಂದು ಚಾಮರಾಜಪೇಟೆಗೆ ಬಂದಿಳಿಯಲಿರೋ ಅರೆಸೇನಾ ಪಡೆ. ರ್ಯಾಪಿಡ್ ಆಕ್ಷ್ಯನ್ ಪೋರ್ಸ್ ಕೂಡ ಕರೆಸಲು ಪೊಲೀಸರ ಸಿದ್ದತೆ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಇಡೀ ಈದ್ಗಾ ಮೈದಾನ ಹಾಗೂ ಚಾಮರಾಜಪೇಟೆ ಸುತ್ತ ಪೊಲೀಸರ ಹದ್ದಿನ ಕಣ್ಣು ಇರಿಸಲಾಗಿದೆ. ಅತಿ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಿ ಬಂದೋಬಸ್ತ್ ಮಾಡಲು ಪೊಲೀಸರ ನಿರ್ಧಾರ ಮಾಡಿದ್ದು, ಮಾಣಿಕ್ ಷಾ ಪೆರೇಡ್ ಮೈದಾನಕ್ಕಿಂತ ಹೆಚ್ಚಿನ ಭದ್ರತೆ ಕಲ್ಪಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.