ಬೆಂಗಳೂರು : 75ನೇ ಸ್ವಾತಂತ್ರ್ಯ ಮಹೋತ್ಸವದಲ್ಲಿ ಸಚಿವರ ಮಹಾ ಎಡವಟ್ಟಾಗಿದ್ದು, ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಬಿಜೆಪಿ ನಾಯಕರು ಅವಮಾನ ಮಾಡಿದ್ದಾರೆ.
ನಗರದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ABVP ಧ್ವಜ ಹಾರಾಟ ಮಾಡಿದ್ದು, ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸುವ ಹಾಗಿಲ್ಲ. ಸಚಿವರ ಈ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು, ಸಚಿವರಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.
ಇನ್ನು, ಕೆ.ಆರ್.ಪುರಂನಲ್ಲಿ ಕಟೀಲ್ ಹಾಗೂ ಸಚಿವ ಬೈರತಿ ಬಸವರಾಜ್ರಿಂದ ಅಪಮಾನ ಆಗಿದ್ದು, ರಾಷ್ಟ್ರಧ್ವಜದ ಬ್ಯಾಡ್ಜ್ ಅನ್ನು ಕಮಲ ನಾಯಕರು ಉಲ್ಟಾ ಧರಿಸಿದ್ದಾರೆ. ಬ್ಯಾಡ್ಜ್ ಉಲ್ಟಾ ಹಾಕಿಕೊಂಡು ರೋಡ್ ಶೋ ಕೊಟ್ಟ ನಾಯಕರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಾರ್ವಜನಿಕರ ಮುಂದೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.