Monday, November 25, 2024

ಮಹಾರಾಷ್ಟ್ರದ ಜಲ್ನಾದಲ್ಲಿ ಮಹಾ ರೇಡ್

ಮಹಾರಾಷ್ಟ್ರ : ಆದಾಯ ತೆರಿಗೆ ಇಲಾಖೆ ಭರ್ಜರಿ ಬೇಟೆಯನ್ನೇ ನಡೆಸಿದೆ. ಮಹಾರಾಷ್ಟ್ರದ ಜಲ್ನಾದಲ್ಲಿ ಉದ್ಯಮಿ ಗುಂಪುಗಳಿಗೆ ಸೇರಿದ ಪ್ರದೇಶಗಳಲ್ಲಿ ಕಂತೆ ಕಂತೆ ನೋಟು, ಕೆಜಿಗಟ್ಟಲೆ ಬಂಗಾರ, ಬೇನಾಮಿ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಒಟ್ಟಾರೆ ಎಲ್ಲ ಆಸ್ತಿಯನ್ನು ಐಟಿ ಇಲಾಖೆ ಸೀಜ್‌ ಮಾಡಿದ್ದು, ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ಮಹಾರಾಷ್ಟ್ರ ಮೂಲದ ಉದ್ಯಮಿಗಳ ಗುಂಪಿನ ಮೇಲೆ ಐಟಿ ಇಲಾಖೆ ರೇಡ್‌ ಮಾಡಿದ್ದು, ಈ ವೇಳೆ 56 ಕೋಟಿ ರೂ. ನಗದು & 14 ಕೋಟಿ ರೂ. ಮೌಲ್ಯದ ಒಡವೆಯನ್ನು ಸೀಜ್‌ ಮಾಡಲಾಗಿದೆ. ಒಟ್ಟಾರೆ 390 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಐಟಿ ಇಲಾಖೆ ಸೀಜ್‌ ಮಾಡಿದೆ. ಈ ಉದ್ಯಮಿಗಳು ಸ್ಟೀಲ್‌ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಕಳೆದ ವಾರ ಆರಂಭವಾದ ಈ ರೇಡ್‌ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಆ ಉದ್ಯಮಿಗಳು ತೆರಿಗೆ ವಂಚಿಸಿದ್ದಾರೆ ಎಂಬ ಸುಳಿವಿನ ಮೇರೆಗೆ ಈ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ. ಈವರೆಗೆ 56 ಕೋಟಿ ರೂ. ನಗದು, 32 ಕೆಜಿ ಚಿನ್ನ, ಮುತ್ತು, ವಜ್ರ ಹಾಗೂ ಆಸ್ತಿ ಪತ್ರ, ಬೇನಾಮಿ ಆಸ್ತಿಯನ್ನು ಸೀಜ್‌ ಮಾಡಲಾಗಿದೆ. ಆಗಸ್ಟ್‌ 1 ರಿಂದ 8ರವರೆಗೆ ಐಟಿ ಇಲಾಖೆ ರೇಡ್‌ ಮಾಡಿದ ವೇಳೆ ಈ ಎಲ್ಲ ಆಸ್ತಿ, ಕಂತೆ ಕಂತೆ ನೋಟು ಪತ್ತೆಯಾಗಿದೆ.

RELATED ARTICLES

Related Articles

TRENDING ARTICLES