ಬೆಂಗಳೂರು : ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾ ಹಾವಳಿಗೆ ಹಬ್ಬದ ಸಂಭ್ರಮವೇ ಇರಲಿಲ್ಲ. ಈ ಬಾರಿ ಸಕತ್ ಆದ್ಧೂರಿ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ವಾರ್ಡ್ ಗೊಂದೆ ಗಣಪ ರೂಲ್ಸ್ ಕೂಡ ಈ ಬಾರಿ ಇರಲ್ಲ ಅಂತಾ ಸರ್ಕಾರ ಆನೌನ್ಸ್ ಮಾಡಿದ್ದು ಇನ್ನಷ್ಟು ಸಿಹಿ ಸುದ್ದಿ. ಆದ್ರೇ ಇದ್ರ ಮಧ್ಯೆ ಈಗ ದಿನದಿಂದ ದಿನಕ್ಕೆ ಕೊರೋನಾ ಕೇಸ್ ಹೆಚ್ಚಳ ಕೇಂದ್ರದಿಂದ ಹೈ ಅಲರ್ಟ್ ಗೆ ಎಚ್ಚರಿಕೆ ಪತ್ರ ಆರೋಗ್ಯ ಇಲಾಖೆಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಹೀಗಾಗಿ ಗಣೇಶ ಹಬ್ಬಕ್ಕೆ ಕೊರೋನಾ ರೂಲ್ಸ್ ಇರಲಿದೆ. ಸಂಪೂರ್ಣ ಕೊರೋನಾ ರೂಲ್ಸ್ ನಿಂದ ವಿನಾಯ್ತಿ ನೀಡಲ್ಲ. ಹೈ ಸ್ಪೀಡ್ ನಲ್ಲಿ ಉಪತಳಿಯ ಕಾಟ ಇರೋದ್ರಿಂದ ಗಣೇಶ ಹಬ್ಬಕ್ಕೆ ರೂಲ್ಸ್ ಹೇರೋದು ಅನಿವಾರ್ಯ ಅಂತಾ ಇಲಾಖೆಯ ಮೂಲಗಳು ಹೇಳುತ್ತಿವೆ.
ಹಾಗಿದ್ರೇ ಗಣೇಶ ಹಬ್ಬಕ್ಕೆ ಜಾರಿಯಾಗಲಿರುವ ರೂಲ್ಸ್ ಏನು..!? ಅಂತ ನೋಡೋದಾದ್ರೆ
1. ಹೆಚ್ಚು ಜನಸಂದಣಿ ಸೇರುವಂತಿಲ್ಲ, ಸಾಮಾಜಿಕ ಅಂತರ ಪಾಲನೆಯಾಗಬೇಕು
2. ಮಾಸ್ಕ್ ಧಾರಣೆ ಕಡ್ಡಾಯ
3. ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವ ಸಾಧ್ಯತೆ
4. ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ ಸಂದರ್ಭದಲ್ಲಿ ಫೀವರ್ ಚೆಕ್ ಕಡ್ಡಾಯಗೊಳಿಸುವ ಸಾಧ್ಯತೆ
5.ಸ್ಯಾನಿಟೈಸರ್ ಬಳಕೆಯ ಬಗ್ಗೆ ಜಾಗೃತಿ
6. ಹೆಚ್ಚು ಜನಸಂದಣಿ ಜಾಗದಲ್ಲಿ ಟೆಸ್ಟಿಂಗ್ ಕ್ಯಾಂಪ್‌ಗಳನ್ನು ಹಾಕುವ ಸಾಧ್ಯತೆ
ಆದ್ರೇ ಆರೋಗ್ಯ ಇಲಾಖೆಯ ಕೊರೋನಾ ರೂಲ್ಸ್ ಗೆ ಮಾತ್ರ ಗಣೇಶೋತ್ಸವ ಸಮಿತಿ, ಹಿಂದೂ ಸಂಘಟನೆ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾವೆ. ಮೊಹರಂ ರಾಜಕೀಯ ರ್ಯಾಲಿಗೆ ಇಲ್ಲದ ರೂಲ್ಸ್ ಗಣೇಶ ಹಬ್ಬ ಬಂದಾಗ ಮಾತ್ರ ಬರುತ್ತಾ ಅಂತಾ ಕಿಡಿಕಾರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಬಿಬಿಎಂಪಿ ವಾರ್ಡ್ ಗೊಂದೆ ಗಣಪತಿ ಗಲಭೆಯ ನಂತ್ರ ತಮ್ಮ ಹೇಳಿಕೆಯನ್ನ ಬಿಬಿಎಂಪಿ ವಾಪಾಸು ತೆಗೆದುಕೊಳ್ಳಲಾಗಿದೆ. ಆದ್ರೇ ಈಗ ಕೊರೋನಾ ರೂಲ್ಸ್ ಮಗದೊಂದು ವಿವಾದ ಸೃಷ್ಟಿಸಲು ತಯಾರಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.