ಬೆಂಗಳೂರು : ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಐದು ಮಹತ್ವದ ಕಾರ್ಯಕ್ರಮಗಳು ನಡೆಯಲಿದ್ದು, ಆದರೆ ಪೊಲೀಸ್ ಇಲಾಖೆಗೆ ಚಾಲೆಂಜಿಗ್ ಡೇ ಆಗಿದೆ.
ನಗರದಲ್ಲಿ, ಬಹುಮುಖ್ಯವಾಗಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಈಗಾಗಲೇ ಸಾಕಷ್ಟು ಸಂದಿಗ್ಧತೆ ತಂದಿಟ್ಟಿದೆ. ಈಗಾಗಲೇ ಪೊಲೀಸರು ಈ ಬಗ್ಗೆ ಸಾಕಷ್ಟು ಸಭೆಗಳನ್ನ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಕೆಎಸ್ಆರ್ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ರ್ಯಾಲಿ ಇದೆ.
ಅದಲ್ಲದೇ, ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರೋ ನೀರಿಕ್ಷೆ ಇದ್ದು, ಕಾಂಗ್ರೆಸ್ ನಡಿಗೆಯಲ್ಲದೆ ಬಿಜೆಪಿ ಸ್ವಾತಂತ್ರ್ಯ ರ್ಯಾಲಿ ಕಾರ್ಪೊರೇಷನ್ ಸರ್ಕಲ್ ನಿಂದ ಕಂಠೀರವ ಸ್ಟೇಡಿಯಂವರೆಗೆ ಇದೆ. ನಂತರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಇದಲ್ಲದೆ ಲಾಲ್ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.
ಇನ್ನು, ಆಗಸ್ಟ್ 15 ರಂದು ಒಂದೇ ದಿನ ನಗರದಲ್ಲಿ ನಡೆಯಲಿದೆ ಐದು ಕಾರ್ಯಕ್ರಮಗಳು ಜರುಗಲಿದ್ದು, ಇದಕ್ಕೆಲ್ಲ ಪೊಲೀಸ್ ಭದ್ರತೆ ನೀಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಪಡೆಗಳ ನಿಯೋಜನೆಗೆ ಪೊಲೀಸ್ ಅಯುಕ್ತರು ಚಿಂತನೆ ನಡೆಸಿದ್ದು, ಸಾರ್ವಜನಿಕರೆ ಅಂದು ರಸ್ತೆಗೆ ಇಳಿಯಬೇಕದ್ರೆ ಯೋಚನೆ ಮಾಡಿ, ಬೆಂಗಳೂರಿನ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಆಗಲಿವೆ.