ಬೆಂಗಳೂರು : ಸದ್ಯ ತಿಂಗಳಿಗೊಮ್ಮೆ ಸಿಎಂ ಬದಲಾವಣೆಯ ಗುಮ್ಮ ಕಾಡ್ತಾನೆ ಇರುತ್ತೆ. ಇದೀಗ ಸರಣಿ ಟ್ವಿಟ್ ಗಳನ್ನ ಮಾಡುವ ಮೂಲಕ ಕಾಂಗ್ರೆಸ್ ಸಿಎಂ ಬದಲಾವಣೆಗೆ ನಾಂದಿ ಹಾಡಿದೆ.. ಇದರಿಂದ ಕೆರಳಿ ಕೆಂಡವಾಗಿರೋ ಕೇಸರಿ ಕಲಿಗಳು ಕೈಪಡೆ ವಿರುದ್ದ ಮಾತಿನ ಸಮರ ನಡೆಸಿದ್ರು. ಯಾವಗ ಸಾಮಾಜಿಕ ಜಾಣತಾಣದಲ್ಲಿ ಕೈ ಬಿಜೆಪಿಯನ್ನ ಕುಟುಕಿ ಸಿಎಂ ಬದಲಾವಣೆ ಬಗ್ಗೆ ಬಾಂಬ್ ಹಾಕ್ತೋ ಅಗ್ಲೇ ಬಿಜೆಪಿ ಕೆಲ ನಾಯಕರಿಗೆ ಹಾಲುತುಪ್ಪದೂಟ ಸಿಕ್ಕಿ ಬಿಡ್ತು.. ಆದ್ರೆ ಇದ್ರಿಂದ ಪಕ್ಷಕ್ಕೆ ಡ್ಯಾಮೇಜ್ ಎಂಬುವುದನ್ನ ಅರಿತ ಬಿಜೆಪಿ ನಾಯಕರು ಬೊಮ್ಮಯಿ ಪರ ಬ್ಯಾಟ್ ಬೀಸಿದ್ರು.
ಕಾಂಗ್ರೆಸ್ ನಾಯಕರಿಗೆ ದಿನಾ ಸುದ್ದಿಯಲ್ಲಿ ಇರಬೇಕು ಅಂತ ಅಸೆ.. ಹಾಗಾಗಿ ಈ ವಿಚಾರ ಪದೇ ಪದೇ ಕೆದಕುತ್ತಿದ್ದಾರೆ. ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡುವ ಅವರು, ವೀರೇಂದ್ರ ಪಾಟೀಲರು ದಾಖಲೆ ಸೀಟು ಪಡೆದು ಗೆಲುವು ಸಾಧಿಸ್ತಾರೆ. ಆದ್ರೆ ಅವರ ಆರೋಗ್ಯ ವಿಚಾರಿಸಲು ಬಂದ ಗಾಂಧಿ ಏರ್ ಪೋರ್ಟ್ ಹೋಗಿ ಬದಲಾವಣೆ ಚೀಟಿ ಕೊಟ್ರು ಆದು ಕಾಂಗ್ರೆಸ್ ಸಂಸ್ಕೃತಿ ಎಂದು ಸಿಟಿ ರವಿ ಕೈಗೆ ಚಾಟೀ ಬೀಸಿದ್ರು.. ಇತ್ತ ಕಟೀಲು ಯಾರು ಏನೇ ಹೇಳಿದ್ರು ಆ ರೀತಿಯ ಬದಲಾವಣೆಗಿಳಿಲ್ಲ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿವೆ. ರಾಜ್ಯದಲ್ಲಿ ನೆರೆ ಇದ್ದರೂ ಸಿದ್ದರಾಮೋತ್ಸವ ಮಾಡಿದ್ದಾರೆ. ೧೦೦ ಕೋಟಿ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ರಾಜ್ಯದ ಜನತೆ ಕಾಂಗ್ರೆಸ್ ವಿರುದ್ಧ ಆಗಿದ್ದಾರೆ. ಕಾಂಗ್ರೆಸ್ ಆಂತರಿಕ ಜಗಳ ಮುಂದುವರೆದಿದೆ. ಅದನ್ನ ಮುಚ್ಚಲು ಇದನ್ನ. ಮಾಡ್ತಿದ್ದಾರೆ ಎಂದು ಕಟೀಲು ಸ್ಪಷ್ಟ ಪಡಿಸಿದ್ರು. ಇನ್ನೂ ಇದೇ ವೇಳೆ ಮಾಜಿ ಸಿಎಂ ಬಿಎಸ್ ವೈ ಸಹ ಸಿಎಂ ಬದಲಾವಣೆ ಕುರಿತ ಚರ್ಚೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಚುನಾವಣಗೆ 7-8 ತಿಂಗಳು ಇರುವಾಗ ಬದಲಾವಣೆ ಪ್ರಶ್ನೆ ಬರುವುದಿಲ್ಲ ಎಂದು ಉತ್ತರಿಸಿದ್ರು.
ಇನ್ನೂ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಏನೋ ಸಿಎಂ ಬದಲಾವಣೆ ಬಗ್ಗೆ ಸರಣಿ ಟ್ವೀಟ್ ಮಾಡ್ತು. ಆದ್ರೆ ಬದಲಾವಣೆ ಟ್ವೀಟ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಮಾಹಿತಿ ಇರಲಿಲ್ಲ. ನಿನ್ನೆಯಿಂದ ತಡವರಿಸುತ್ತಲೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ರು. ಆದ್ರೆ ಇವತ್ತು ಮತ್ತೆ ಟ್ವೀಟ್ ಮಾಡಿದಾಗ ಉತ್ತರಿಸಲೇ ಬೇಕಾದ ಅನಿವಾರ್ಯತೆ ಕಾಂಗ್ರೆಸ್ ನಾಯಕರಿಗೆ ಬಂತು. ನಾವು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆಯನ್ನು ಫಿಕ್ ಮಾಡಿದ್ದೇವೆ. ಬಿಜೆಪಿ ಕೊಟ್ಟ ಮಾಹಿತಿಯೇ ನಮ್ಮ ಟ್ವೀಟ್‌ಮಾಡಲು ಆಹಾರ ಅಂತ ಕಾಂಗ್ರೆಸ್ ಟ್ವೀಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮರ್ಥನೆ ಮಾಡಿಕೊಂಡ್ರು.
ಒಟ್ಟಿನಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಗಳು ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಹುಟ್ಟುಹಾಕಿವೆ. ಇಂತಹ ಯಾವುದೇ ಬದಲಾವಣೆ ಇಲ್ಲ ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ವಾಗ್ದಾಳಿ ಗೆ ಉತ್ತರಿಸಲು ಕೈ ನಾಯಕರು ತಡವರಿಸುತ್ತಿರೋದು ವಿಪರ್ಯಾಸ.. ಆದ್ರೆ ಅದೇನೆ ಇರಲಿ ಬೆಂಕಿ ಇರದೆ ಹೊಗೆ ಅಡೋಲ್ಲ ಅನ್ನೋದು ಅಷ್ಟೇ ಸತ್ಯಾ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.