Friday, November 22, 2024

ಅಂದು ಯಶ್.. ಇಂದು ದೇವರಕೊಂಡ.. ಅದೇ ಕ್ರೇಜ್

ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೌತ್ ಸಿನಿಮಾಗಳದ್ದೇ ಅಬ್ಬರ, ಸೌತ್ ಸ್ಟಾರ್​ಗಳದ್ದೇ ಆಡಂಬರ. ಅದ್ರಲ್ಲೂ ಕನ್ನಡ ಹಾಗೂ ತೆಲುಗು ಸ್ಟಾರ್ಸ್​ ಬಾಲಿವುಡ್ ಮೇಲೆ ಸಖತ್ ಸವಾರಿ ಮಾಡ್ತಿದ್ದಾರೆ. ಬಿಟೌನ್ ಸೂಪರ್ ಸ್ಟಾರ್​ಗಳ ಡೈಹಾರ್ಡ್​ ಫ್ಯಾನ್ಸ್ ಎಲ್ಲಾ ನಮ್ಮ ಸೌತ್ ನಟರ ಫಾಲೋವರ್ಸ್​ ಆಗಿ ಬದಲಾಗ್ತಿದ್ದಾರೆ. ಮೊನ್ನೆ ರಾಕಿಭಾಯ್ ಕ್ರೇಜ್, ಇಂದು ದೇವರಕೊಂಡ ಇಮೇಜ್. ಸೇಮ್ ಟು ಸೇಮ್ ಕಹಾನಿ ನೀವೇ ಓದಿ.

  • ಬಿಟೌನ್ ಸ್ಟಾರ್​ ಫ್ಯಾನ್ಸ್ ಎಲ್ಲಾ ಸೌತ್ ಹೀರೋಸ್​ಗೆ ಫಿದಾ
  • ಗುಜರಾತ್​ನಲ್ಲಿ ಲೈಗರ್ ರೌಡಿ ವಿಜಯ್ ಕ್ರೇಜ್ ಕಾ ಬಾಪ್

ಸ್ಟಾರ್​ಡಮ್, ಕ್ರೇಜ್, ಕೋಟ್ಯಂತರ ಅಭಿಮಾನಿ ಬಳಗ.. ಇವೆಲ್ಲವೂ ಯಾವುದೇ ಒಬ್ಬ ಕಲಾವಿದನಿಗೆ ಅಷ್ಟು ಸುಲಭವಾಗಿ ಸಿಗಲು ಸಾಧ್ಯವಿಲ್ಲ. ಅದ್ರ ಹಿಂದೆ ಅವ್ರ ಯುನಿಕ್ ಸ್ಟೈಲು, ಮ್ಯಾನರಿಸಂ ಇರಲಿದೆ. ಮಾಸ್ ಇಮೇಜ್ ಮುಖ್ಯವಾಗುತ್ತೆ. ಜೊತೆಗೆ ಭಾಷೆಯ ಮೇಲೆ ಹಿಡಿತ, ತೆರೆ ಮೇಲೆ ಹಾಗೂ ತೆರೆ ಹಿಂದೆ ಅವ್ರ ನಡೆ, ನುಡಿ ಎಲ್ಲವೂ ಮ್ಯಾಟರ್ ಆಗತ್ತೆ.

ಹಾಗಾಗಿಯೇ ಸೌತ್​ನ ಸ್ಟಾರ್ಸ್​ ಬಾಲಿವುಡ್ ಸೂಪರ್ ಸ್ಟಾರ್ಸ್​ನ ಹಿಂದಿಕ್ಕಿ, ರೇಸ್​ನಲ್ಲಿ ಅಗ್ರ ಪಂಕ್ತಿ ಅಲಂಕರಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾದಿಂದ ನಮ್ಮ ರಾಕಿಭಾಯ್ ಯೂತ್ ಐಕಾನ್ ಆದ್ರು. ಪ್ಯಾನ್ ಇಂಡಿಯಾ ಯಂಗೆಸ್ಟ್ ಸೂಪರ್ ಸ್ಟಾರ್ ಆಗಿ ಮಿಂಚಿದ್ರು. ದೇಶದ ಯಾವುದೇ ಮೂಲೆಗೆ ಹೋದ್ರೂ, ಸಲಾಂ ರಾಕಿಭಾಯ್ ಅಂತಿದ್ರು. ಅಷ್ಟರ ಮಟ್ಟಿಗೆ ಹವಾ ಇಟ್ಟಿದ್ರು.

ಇದೀಗ ನಮ್ ರಾಕಿಭಾಯ್ ಹಾದಿಯಲ್ಲಿ ವಿಜಯ್ ದೇವರಕೊಂಡ ಟಾಲಿವುಡ್​ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದಿಂದ ಕ್ರೇಜ್ ಕಾ ಬಾಪ್ ಆಗಿದ್ದ ದೇವರಕೊಂಡ, ಇದೀಗ ಆ ಕ್ರೇಜ್​ನ ನಾರ್ಥ್​ಗೂ ವಿಸ್ತರಿಸುತ್ತಿದ್ದಾರೆ. ಅದೂ ಲೈಗರ್ ಚಿತ್ರದಿಂದ ಅನ್ನೋದು ವಿಶೇಷ. ಅದಕ್ಕೆ ಕರಣ್ ಜೋಹರ್ ಕೂಡ ಕೈಜೋಡಿಸಿದ್ದು, ಗುಜರಾತ್​ನಲ್ಲಿ ನಡೆದ ಪ್ರೊಮೋಷನಲ್ ಇವೆಂಟ್​ನಲ್ಲಿ ರೌಡಿ ವಿಜಯ್​ಗಾಗಿ ಹರಿದುಬಂದ ಜನಸಾಗರವೇ ಅದಕ್ಕೆ ಸಾಕ್ಷಿಯಾಗಿದೆ.

ಪೂರಿ ಜಗನ್ನಾಥ್ ನಿರ್ದೇಶಿಸಿ, ಕರಣ್ ಜೋಹಾರ್, ಚಾರ್ಮಿ ಜೊತೆ ನಿರ್ಮಿಸಿರೋ ಲೈಗರ್ ಪಂಚಭಾಷೆಯಲ್ಲಿ ಪಂಚ್ ನೀಡಲಿದೆ. ಕೆಜಿಎಫ್ ಮಾದರಿಯಲ್ಲಿ ಲೈಗರ್​ ಪ್ರಚಾರ ಕಾರ್ಯಗಳು ಪ್ಲಾನ್ ಆಗಿದ್ದು, ದೇಶಾದ್ಯಂತ ವಿಜೃಂಭಿಸಲಿದ್ದಾರೆ ಟಾಲಿವುಡ್​ನ ವಿಜಯ್ ದೇವರಕೊಂಡ. ಅಂದಹಾಗೆ ಇದೇ ಆಗಸ್ಟ್ 25ಕ್ಕೆ ತೆರೆಗೆ ಬರ್ತಿದೆ ಲೈಗರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES