ಮೈಸೂರು : ನಾಡಹಬ್ಬ ದಸರಾ ಚಟುವಟಿಕೆಗಳು ಮೈಸೂರಿನಲ್ಲಿ ಗರಿಗೆದರುತ್ತಿವೆ. ಇದರ ಮೊದಲ ಭಾಗವಾಗಿ ನಾಳೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಮೈಸೂರಿಗೆ ಬರುವ ಮೊದಲು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ.
ಇನ್ನು, ಅಂಬಾರಿ ಹೊರುವ ಅಭಿಮನ್ಯು, ಭೀಮ, ಮಹೇಂದ್ರ, ಗೋಪಾಲಸ್ವಾಮ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಗೋಪಿ, ಶ್ರೀರಾಮ, ವಿಜಯ, ಚೈತ್ರ, ಲಕ್ಷ್ಮಿ ಹಾಗೂ ಪಾರ್ಥ ಸಾರಥಿ (18) ಈ ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಆನೆಗಳು. ಜನಪ್ರತಿನಿಧಿಗಳು ಗಜಪಯಣಕ್ಕೆ ಸ್ವಾಗತ ಕೋರಲಿದ್ದಾರೆ.
ಗಜಪಡೆಯ ಕ್ಯಾಪ್ಟನ್ ಅರ್ಜುನ ಸೇರಿದಂತೆ 9 ಆನೆಗಳು ಮೊದಲ ತಂಡದಲ್ಲಿ ಬರಲಿದ್ದು, 2ನೇ ತಂಡದಲ್ಲಿ 5 ಆನೆಗಳು ಬರಲಿವೆ. ಜಂಬೂ ಸವಾರಿಯಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿದ್ದು ಸ್ಟ್ಯಾಂಡ್ ಬೈ ರೂಪದಲ್ಲಿ ಇರಿಸಿಕೊಳ್ಳಲು 3 ಆನೆಗಳನ್ನು ಹೆಚ್ಚುವರಿಯಾಗಿ ನಾಡಿಗೆ ಕರೆಸಿಕೊಳ್ಳಲಾಗುತ್ತಿದೆ. ಹೀಗೆ ಬಂದ ಆನೆಗಳನ್ನು ಎರಡು ದಿನ ಅರಣ್ಯ ಇಲಾಖೆಯ ಆವರಣದಲ್ಲಿ ವಿಶ್ರಾಂತಿಗೆ ಬಿಡಲಾಗುತ್ತದೆ. ಆಗಸ್ಟ್ 10ರಂದು ಮೈಸೂರು ಅರಮನೆಗೆ ಈ ಆನೆಗಳನ್ನು ಸ್ವಾಗತಿಸಲಾಗುತ್ತದೆ.