ಚಿಕ್ಕಬಳ್ಳಾಪುರ : ಸ್ವಾತಂತ್ರ್ಯ, ಸಂವಿಧಾನ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರ ಕ್ಕೆ ಬರಬೇಕಿದೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕಾಂಗ್ರೆಸ್ ಪಾದಯಾತ್ರೆ ಮಾಡಿದ್ದು, ಇಡೀ ವರ್ಷ ಸ್ವಾತಂತ್ರ್ಯ ಮಹೋತ್ಸವ ಆಚರಿಸಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಸಾಕಷ್ಟು ಹೋರಾಟ ಮಾಡಿದೆ. ಈ ದೇಶ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಕಾರಣ, ಜೆಡಿಎಸ್, ಬಿಜೆಪಿ ಪಾತ್ರವಿಲ್ಲ ಎಂದರು.
ಅದಲ್ಲದೇ, ಸ್ವಾತಂತ್ರ್ಯ ಹೋರಾಟದ ವೇಳೆ ಆರ್ ಎಸ್ ಎಸ್ ಬ್ರಿಟಿಷರ ಜೊತೆ ಇದ್ದರು. ನಮ್ಮ ಹೋರಾಟಗಾರರ ಬಂಧನಕ್ಕೆ ಆರ್ ಎಸ್ ಎಸ್ ಪಾತ್ರ ಹೆಚ್ಚಿದೆ. ಸ್ವಾತಂತ್ರ್ಯ, ಸಂವಿಧಾನ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ರಾಷ್ಟ್ರ ಧ್ವಜ ಅಂದರೆ ನಮ್ಮೆಲ್ಲರ ಹೆಮ್ಮೆ. ಇದೇ ರಾಷ್ಟ್ರ ಧ್ವಜದ ವಿರುದ್ಧ ಬಿಜೆಪಿ ವಿರೋಧಿಸಿತ್ತು. ಈಗ ಮಾತ್ರ ಹರ್ ಘರ್ ತಿರಂಗಾ ಅಂತಿದ್ದಾರೆ ನಾಚಿಕೆ ಆಗೋದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಒಬ್ಬರು ಸತ್ತಿಲ್ಲ. ಬಿಜೆಪಿಯವರು ಬರೀ ಡೋಂಗಿಗಳು, ಏನು ಅಭಿವೃದ್ಧಿ ಮಾಡಿಲ್ಲ. ಹಿಂದೂ , ಮುಸ್ಲಿಂ ಅಣ್ಣ ತಮ್ಮಂದಿರ ಹಾಗೇ ಬದುಕಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನನ್ನ ಹುಟ್ಟುಹಬ್ಬಕ್ಕೆ ಬಂದ ಜನರನ್ನು ನೋಡಿ ಬಿಜೆಪಿಗೆ ಭಯ ಬಂದಿದೆ. ಭಯದಿಂದಲೇ ಬಿಜೆಪಿ ನಾಯಕರು ಈಗ ಮಾತನಾಡುತ್ತಿದ್ದಾರೆ ಎಂದರು.