ರಾಮನಗರ : ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜಲಧಾರೆ ಕಾರ್ಯಕ್ರಮದಿಂದಾಗಿ ಒಳ್ಳೆಯ ಮಳೆಯಾಗ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಣ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಒತ್ತಾಸೆಯಿಂದ ಇಂದು ಬಾಗಿನ ಅರ್ಪಸಿದೆ. ರಾಜ್ಯದ ಹಲವಾರು ಪ್ರದೇಶಗಳಲ್ಲಿ ಈ ರೀತಿ ಒಂದು ಚರ್ಚೆ ನಡೀತಿದೆ. ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜಲಧಾರೆ ಕಾರ್ಯಕ್ರಮದಿಂದಾಗಿ ಒಳ್ಳೆಯ ಮಳೆಯಾಗ್ತಿದೆ. 20 ವರ್ಷಗಳ ನಂತರ ಎಲ್ಲಾ ಕೆರೆಗಳು, ನದಿಗಳು ಇಂದು ಕೋಡಿ ಬಿದ್ದಿವೆ. ನಮ್ಮ ಒಂದು ಪರಿಶುದ್ದ ಕಾರ್ಯಕ್ರಮದಿಂದ ಈ ರೀತಿ ಉತ್ತಮ ಮಳೆಯಾಗ್ತಿದೆ ಎಂದರು.
ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಬಗ್ಗೆ ಕುಮಾರಸ್ವಾಮಿಗೆ ಪರಿಕಲ್ಪನೆ ಇಲ್ಲ ಎಂಬ ಸಿಪಿವೈ ಹೇಳಿಕೆಗೆ ಹೆಚ್ ಡಿಕೆ ತಿರುಗೇಟು ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾಪ ನಾನು ಅವರಷ್ಟು ನೀರಾವರಿ ತಜ್ಞ ಅಲ್ಲ. ನೀರಾವರಿ ತಜ್ಞರಾಗಿ ಅವರೇನು ಹೊರ ಹೊಮ್ಮಿದ್ದಾರೆ. ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡು ನೀರಾವರಿ ತಜ್ಞರಾಗಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟ್ ಮಾಡಿಕೊಂಡು ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡಿತ್ತಿದ್ದಾರಲ್ಲ. ಮೆಗಾಸಿಟಿ ಪ್ರಾಜೆಕ್ಟ್ ಮಾಡಿಕೊಂಡು ಸಾವಿರಾರು ಜನರಿಗೆ ಮೋಸ ಮಾಡಿದ್ರಲ್ಲ. ಅವಾಗ ಅವರಿಗೆ ನೀರಾವರಿ ಯೋಜನೆ ಬಗ್ಗೆ ಕಲ್ಪನೆ ಇರಲಿಲ್ಲ. ನಿನ್ನೆ ಅವರು ಕೊಟ್ಟ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದು ಹೇಳಿದರು.
ಇನ್ನು, ಮಳೆಯಿಂದಾಗಿ ಅಂತಹ ದೊಡ್ಡ ಸಮಸ್ಯೆಗಳೇನು ಆಗಿಲ್ಲ ಅಂತಾ ಅವರೇ ಹೇಳಿದ್ದಾರೆ. ಅಭಿವೃದ್ಧಿ ಯಾರು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಾಗಿದೆ. ಮಾಕಳಿ ಮೈನರ್ ಇರಿಗೇಷನ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ. ಕಾಲ್ನಡಿಗೆ ಮಾಡಿಕೊಂಡು ಹೋಗಿ ನೀರಾವರಿ ಯೋಜನೆ ಮಾಡಿದ್ದೀನಿ ಅಂತಾ ಹೇಳಿದ್ದಾರೆ. ಮಾಗಡಿ ಹಾಗೂ ರಾಮನಗರ ತಾಲ್ಲೂಕಿಗೆ ಶಾಶ್ವತ ನೀರಾವರಿ ಮಾಡಬೇಕೆಂಬ ಕಲ್ಪನೆ ಹೊಂದಿದ್ದೇನೆ. ನಮ್ಮ ಪರಿಶುದ್ದವಾದ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ದೇವರು ಈಡೇರಿಸುತ್ತಾನೆ ಎಂದರು.