ಬೆಂಗಳೂರು : ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಕೆ.ಆರ್.ಮಾರ್ಕೆಟ್ನಲ್ಲಿ ಹಬ್ಬದ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.
ನಗರದಲ್ಲಿ, ಹೂವು, ಹಣ್ಣು, ತರಕಾರಿ, ಖರೀದಿಯಲ್ಲಿ ಫುಲ್ ಬ್ಯುಸಿಯಾಗಿದ್ದು, ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ಜನರು ಮುಗಿಬಿದ್ದಿದ್ದಾರೆ. ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಕೆ.ಆರ್.ಪುರ, ಯಶವಂತಪುರ ಸೇರಿದಂತೆ ಹಲವು ಕಡೆ ಹಬ್ಬದ ವ್ಯಾಪರ ಜೋರಾಗಿದೆ. ಮುಖ್ಯರಸ್ತೆಯ ಎರಡು ಬದಿಗಳಲ್ಲೂ ವ್ಯಾಪಾರ ನಡೆಯುತ್ತಿರುವುದರಿಂದ ಕೆ.ಆರ್.ಮಾರ್ಕೆಟ್ನ ಮುಖ್ಯರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ.
ಮಹಾಲಕ್ಷ್ಮಿ ಹಬ್ಬಕ್ಕೆ ಪುಲ್ ಡಿಮ್ಯಾಂಡ್
ಮಲ್ಲಿಗೆ ಮಳ 100 ರೂ
ಕಾಕಡ -ಒಂದು ಮಳ 50 ರೂಪಾಯಿ
ಚಂಡು ಹೂವ ಮಾರ 100 ರೂಪಾಯಿ
ಬಿಡಿ ಹೂವ ಕೆ.ಜಿನ 300 ರೂಪಾಯಿ
ಹಾರ ಒಂದು ಜೋಡಿಗೆ 200 ರೀಪಾಯಿ
ಬಾಳೆ ದಿಂಡು ಜೋಡಿಗೆ 100 ರೂಪಾಯಿ
ಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹಣ್ಣಿನ ಬೆಲೆ
ಬಾಳೆ ಹಣ್ಣು ಒಂದು ಕೆಜಿ 100 ರೂಪಾಯಿ
ಆಪಲ್- ಒಂದು ಕೆಜಿಗೆ 200
ದಾಳಿಂಬೆ 150
ಮೋಸಂಬಿ 60
ಆರೆಂಜ್ 150 ರೂಪಾಯಿ