Friday, November 22, 2024

ಮಹಾಮಳೆಗೆ ಸಿಲಿಕಾನ್​ ಸಿಟಿ ತತ್ತರ..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿಯಲು ಆರಂಭಿಸಿತು ಅಂದ್ರೆ ತಗ್ಗು ಪ್ರದೇಶದ ಜನ್ರಿಗೆ ಢವಢವ ಶುರುವಾಗಿ ಬಿಡುತ್ತೆ. ರಾತ್ರಿ ಮಳೆ ಶುರುವಾದ್ರಂತೂ ಜನರಿಗೆ ನಿದ್ದೆ ಕನಸಿನ ಮಾತು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಯಶವಂತಪುರ, ಬಿಟಿಎಂ, ಕನಕನಗರ ಸೇರಿ ಹಲವು ಭಾಗದಲ್ಲಿ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ. ಕುಮಾರಸ್ವಾಮಿ ಲೇಔಟ್​ನ ಹಲವು ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ ಮನೆಗಳೆಲ್ಲಾ ಕೆರೆಯಂತಾಗಿತ್ತು. ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ದಿನಸಿ ಸಾಮಾನು ಸಂಪೂರ್ಣ ಜಲಾವೃತವಾಗಿತ್ತು. ಯಶವಂತಪುರ, ಬಿಟಿಎಂನಲ್ಲೂ ತಗ್ಗುಪ್ರದೇಶದಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕನಕನಗರದಲ್ಲಿ ಬಾಬಾಜಾನ್ ಅನ್ನುವವರು ನೂತನ ಮನೆಕಟ್ಟಿ ಗೃಹಪ್ರವೇಶ ಸಮಾರಂಭ ಇಟ್ಟುಕೊಂಡಿದ್ರು. ರಾತ್ರಿ ಕಾರ್ಯಕ್ರಮಕ್ಕಾಗಿ 350 ಮಂದಿಗೆ ಬಿರಿಯಾನಿ ಸೇರಿ ಹಲವಾರು ಖಾದ್ಯಗಳು ರೆಡಿಯಾಗಿತ್ತು. ಆದ್ರೆ ರಾತ್ರಿ ಆರಂಭವಾದ ಮಳೆ ಮಾಡಿಟ್ಟ ಅಡುಗೆಯನ್ನ ಹಾಳು ಮಾಡಿದೆ. ನೂತನ ಗೃಹಪ್ರವೇಶದ ಮನೆಗೆ ಅಥಿತಿಗಳ ಬದಲಾಗಿ ಮೋರಿ ನುಗ್ಗಿದೆ. ಸಂಭ್ರಮದ ಮನೆ ಕೆಲವೇ ಕ್ಷಣಗಳಲ್ಲಿ ಗಬ್ಬೆದ್ದು ನಾರುವಂತಾ ಸ್ಥಿತಿಗೆ ತಲುಪಿತು.

ಇದೆಲ್ಲದರ ನಡುವೆ ಇನ್ನೂ 5 ದಿನಗಳು ಮಳೆಯಾಗೋ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ತಗ್ಗುಪ್ರದೇಶದ ಜನರು ಮತ್ತೆ ಕಂಗೆಟ್ಟು ಕೂರೋ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಬಿಬಿಎಂಪಿ ಮಾತ್ರ ಮಳೆ ಬರೋದು ಕಾಮನ್, ಪ್ರಾಬ್ಲಂ ಸಹ ಕಾಮನ್, ಜನ್ರಿಗೊಂದಷ್ಟು ಪರಿಹಾರಕೊಟ್ಟು ಕಣ್ಣೊರೆಸಿದ್ರೆ ಮುಗಿದೋಗುತ್ತೆ ಕೆಲ್ಸ ಅನ್ನೋ ಮನಸ್ಥಿತಿಗೆ ಬಂದಂತೆ ಕಾಣಿಸ್ತಿದೆ.

RELATED ARTICLES

Related Articles

TRENDING ARTICLES