Sunday, October 27, 2024

ಹೈದರಾಬಾದ್​​ನಲ್ಲಿ ಬಿಜೆಪಿ ಸ್ಟ್ರಾಂಗ್ ಆಗಿದೆ : ಬಾಬುರಾವ್ ಚಿಂಚನಸೂರ್

ಬೆಂಗಳೂರು : ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನ ಯಾರು ಅಲ್ಲಾಡಿಸಲು ಆಗೊಲ್ಲ ಎಂದು ಪರಿಷತ್ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾನು 5 ಬಾರಿ ಗೆಲುವು ಸಾಧಿಸಿದ್ದೆ, ಆ ಭಾಗದಲ್ಲಿ ನಮ್ಮ ಕೋಲಿ ಸಮಾಜ ಶೇ 45 ರಷ್ಟಿದೆ. ನನ್ನನ್ನ ಗುರುತಿಸಿ ಪಕ್ಷ ಪರಿಷತ್ ಚುನಾವಣೆಗೆ ಟಿಕೇಟ್ ನೀಡಿದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನ ಯಾರು ಅಲ್ಲಾಡಿಸಲು ಆಗೊಲ್ಲ. ಆ ಭಾಗದಲ್ಲಿ ಬಿಜೆಪಿ ತುಂಬ ಸ್ಟ್ರಾಂಗ್ ಆಗಿದೆ ಎಂದರು.

ಅದಲ್ಲದೇ, ಮುಂದಿನ ಬಾರಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಪ್ರಿಯಾಂಕ ಖರ್ಗೆ ಅವರ ಎದುರು ನಿಲ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಕಥೆಯಲ್ಲಾ ಇನ್ನು ಮುಗಿಯಿತು. ಇನ್ನು ಮುಂದೆ ನೋಡ್ತೀರಿ ಹೈದ್ರಾಬಾದ್ ಭಾಗದಲ್ಲಿ ಬಿಜೆಪಿ ಸ್ಟ್ರಾಂಗ್ ಆಗುತ್ತೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES