Friday, November 22, 2024

ಸಾವಿನಲ್ಲೂ ತಾರಕಕ್ಕೇರಿದ ಕೈ, ಕಮಲ ಕೆಸರೆರಚಾಟ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನ ಸರ್ಕಾರ ಎನ್ ಐ ಎ ತನಿಖೆಗೆ ನೀಡಿದೆ.ಸರ್ಕಾರದ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರೇ ರೋಷಾಗ್ನಿ ವ್ಯಕ್ತಪಡಿಸುತ್ತಿದ್ದಾರೆ.ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ ,ಜೆಡಿಎಸ್ ಕೂಡ ಸರ್ಕಾರ ವಿರುದ್ಧ ತಿರುಗಿಬಿದ್ದಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು,ಸಿಎಂ ಸ್ಥಾನ ನಿಭಾಯಿಸೋದಕ್ಕೆ ಬಸವರಾಜ್ ಬೊಮ್ಮಾಯಿಗೆ ಆಗುತ್ತಿಲ್ಲ‌.ಗೃಹ ಸಚಿವರು ರಾಜೀನಾಮೆ ಕೊಡ್ಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯದಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಮಾಡೆಲ್ ಜಾರಿ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹ ಮಾಡುತ್ತಿದ್ದಾರೆ.ಸರ್ಕಾರ ಕೂಡ ಅಗತ್ಯ ಬಿದ್ರೆ ಯುಪಿ ಮಾಡೆಲ್ ಜಾರಿ ಮಾಡುವುದಾಗಿ ಹೇಳಿದೆ.ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ,ಪ್ರತಿಪಕ್ಷ ಕಾಂಗ್ರೆಸ್, ಕರ್ನಾಟಕ ಹಲವು ವಿಚಾರಗಳಿಗೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ.ಅಲ್ಲಿನ ಮಾದರಿ ನಮ್ಮ‌ ರಾಜ್ಯದಲ್ಲಿ ಏಕೆ ಜಾರಿ ಮಾಡ್ಬೇಕು ಎಂದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ನಿಮಗೆ ತಾಕತ್ ಇದ್ರೆ SDPI ,PFI ಬ್ಯಾನ್ ಮಾಡಿ ಎಂದು ಸರ್ಕಾರಕ್ಕೆ ಕೈ ನಾಯಕರು ಸವಾಲು ಹಾಕಿದ್ದಾರೆ.ಅಲ್ದೇ ಪ್ರವೀಣ್ ನೆಟ್ಟಾರು ,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕಾರಿನ ಚಾಲಕ ಆಗಿದ್ದರು.ಏಕಾಏಕಿ ಪ್ರವೀಣ್ ಕೆಲಸ ಬಿಡಲು ಕಾರಣವೇನು..? ಈ ಬಗ್ಗೆ ಸತ್ಯಾಂಸ ಗೊತ್ತಾಗಬೇಕಾದ್ರೆ ,ನಳೀನ್ ಕುಮಾರ್ ಕಟೀಲ್ ರವರನ್ನ ತನಿಖೆಗೆ ಒಳಪಡಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇರವಾಗಿ ಅಟ್ಯಾಕ್ ಮಾಡಿದ್ದಾರೆ.

ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ನಿವಾಸಕ್ಕೆ ನಿನ್ನೆ ಸಿಎಂ ಭೇಟಿ ನೀಡಿ,ಕುಟುಂಬಕ್ಕೆ ಸ್ವಾಂತನ ಹೇಳಿದ್ದರು. ಅದೇ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಸೂದ್ ಕೂಡ ಕಳೆದ ವಾರವಷ್ಟೇ ಹತ್ಯೆಯಾಗಿದ್ದೆ.ಈ ಬಗ್ಗೆ ಸರಣಿ ಟ್ವೀಟ್ ಮಾಡಿ‌‌ ಸಿಎಂ ಬೊಮ್ಮಾಯಿ‌ ನಡೆಗೆ‌ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ‌ ಸಿಎಂ‌ ಹೆಚ್ ಡಿ ಕುಮಾರಸ್ವಾಮಿ,ನೀವು ಬಿಜೆಪಿ ಪಕ್ಷಕ್ಕೆ ಮಾತ್ರ ಸಿಎಂ.ಮಸೂದ್ ಕೂಡ ಹತ್ಯೆಯಾಗಿದ್ದಾನೆ. ಅವ್ರ ಕುಟುಂಬದವರನ್ನ ಭೇಟಿ ಮಾಡಿ ಸ್ವಾಂತನ ಹೇಳಲು ನಿಮ್ಗೆ ಆಗಲಿಲ್ಬಾ? ಕರ್ನಾಟಕವನ್ನ‌ ಇಬ್ಬಾಗ ಮಾಡುವ ಮನಸ್ಥಿತಿ ನಿಮ್ದು ಎಂದು ಹೆಚ್ ಡಿ ಕೆ ಟೀಕಾ ಪ್ರಹಾರ ನಡೆಸಿದ್ದಾರೆ.

ಇನ್ನು ಪಕ್ಷ ಹಾಗು ಸರ್ಕಾರದಿಂದ ಪ್ರವೀಣ್ ಕುಟುಂಬಕ್ಕೆ ಪರಿಹಾರ ಹಣ ನೀಡಿದೆ.ಹೀಗಾಗಿ, ಪರಿಹಾರ ವಿಚಾರದಲ್ಲೂ ನೀವು ರಾಜಕೀಯ ಮಾಡ್ಬೇಡಿ,ಮಸೂದ್ ಕುಟುಂಬಕ್ಕೂ ಪರಿಹಾರ ಹಣ ನೀಡಿ ಎಂದು ಕಾಂಗ್ರೆಸ್, ಜೆಡಿಎಸ್, ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಒಟ್ಟಾರೆ,ಕರವಾಳಿಯಲ್ಲಿ ಸರಣಿ ಹತ್ಯೆ ಪ್ರಕರಣಗಳು ಇದೀಗ ರಾಜಕೀಯ ಸ್ವರೂಪ ಪಡೆದಿದೆ. ಇದು ಮುಂದೆ ಯಾವ ಸ್ವರೂಪ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES