Sunday, November 24, 2024

ಬೆಂಗಳೂರಿನಲ್ಲಿ ಕುಂದಾಪುರದ ಕಲಾ ವೈಭವ..!

ಬೆಂಗಳೂರು: ಕುಂದಾಪರದಲ್ಲಿ ಎಷ್ಟು ಸೊಬಗಿದೆಯೋ ಅಷ್ಟೇ ಸೊಬಗು ಆ ಭಾಷೆಯಲ್ಲೂ ಇದೆ. ಕುಂದಾಪುರ ಭಾಷೆ ಬದುಕನ್ನು ಮತ್ತಷ್ಟು ಪ್ರಚಾರಪಡಿಸಲು ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಾಗುತ್ತಿದೆ. ಹೀಗಾಗಿ ಇಂದು ಕುಂದಾಪುರ ‌ಕಲೆ ಸಂಸ್ಕೃತಿಯನ್ನು ಬೆಂಗಳೂರಿನಲ್ಲಿ ಅನಾವರಣ ಮಾಡಲಾಯ್ತು.

ಹ್ವಾಯ್ ಕುಂದಾಪ್ರ ಭಾಷಿ ಚೆಂದ, ಬದ್ಕ್ ಎಲ್ಲಕ್ಕಿಂತ ಚೆಂದ.‌ಹೌದು.. ಕುಂದಾಪುರ ಎಷ್ಟು ಪ್ರಾಕೃತಿಕ ಸೊಬಗನ್ನು ಹೊಂದಿದೆಯೋ ಹಾಗೇ ಅಲ್ಲಿನ ಭಾಷೆ ಬದುಕು ಅಷ್ಟೇ ಅನನ್ಯವಾಗಿದೆ.ಹೀಗಾಗಿ‌ ಮಾಜಿ CM ಸಿದ್ದರಾಮಯ್ಯ, H.D.ಕುಮಾರಸ್ವಾಮಿ ಟ್ವೀಟ್ ಮೂಲಕ‌ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಶುಭ ಹಾರೈಸಿದ್ರು.

 ಬೆಂಗಳೂರಿನ ಬಂಟರ ಸಂಘದ‌ ಹಾಲಿನಲ್ಲಿ ವಿಶ್ವಕುಂದಾಪ್ರ ಕನ್ನಡ ದಿನವನ್ನು ವಿಶೇಷವಾಗಿ ಆಚರಿಸಲಾಯ್ತು. ಕುಂದಾಪ್ರ ‌ಕನ್ನಡ ಗೀತೆಯನ್ನು ಯುವ ಗಾಯಕಿ ಸಾನ್ವಿ ಶೆಟ್ಟಿ ಹಾಡಿ ಜನರನ್ನು ರಂಜಿಸಿದ್ರು. ಚೇತನ್ ನೈಲಾಡಿ ನೇತೃತ್ವದಲ್ಲಿ ಹೆಂಗಸರ ಪಂಚಾಯ್ತಿ, ಕಾರ್ಯಕ್ರಮದ ಮೂಲಕ ಸಂಸ್ಕೃತಿ ಬಿಂಬಿಸುತ್ತಾ ಹಾಸ್ಯದ ಮೂಲಕ ಭಾಷಿ, ಬದ್ಕನ್ನ ತೋರಿಸಿಕೊಟ್ಟರು. ಕುಂದಾಪ್ರ ಕನ್ನಡದ ರಾಯಭಾರಿ ‌ಎಂದೇ ಖ್ಯಾತಿಯಾಗಿರೋ ಮನು ಹಂದಾಡಿ ಕುಂದಾಪ್ರ ಭಾಷೆಯಲ್ಲಿ ಹಾಸ್ಯದ ಮೂಲಕವೇ ಭಾಷೆಯ ಮಹತ್ವ ಸಾರಿದ್ರು. ತಮ್ಮ ಮಾತಿನ ಕೊನೆಯವರೆಗೂ ಪ್ರೇಕ್ಷಕರನ್ನು ನೆಗೆಗಡಲಲ್ಲಿ ತೇಲಿಸಿದ್ರು.

ಕುಂದಾಪ್ರ ಕಟ್ಕಟ್ಲೆ ಕಾರ್ಯಕ್ರಮದ ಮೂಲಕ ಈ ಭಾಗದ ಮಹತ್ವದ ಸಂಸ್ಕ್ರತಿಯನ್ನು ಪರಿಚಯಿಸಲಾಯ್ತು. ಬೆಂಗಳೂರಿನ ಹಲವರಿಗೆ ಕುಂದಾಪುರ ವೈಶಿಷ್ಟ್ಯ ವಿಭಿನ್ನ ಹಬ್ಬದ ಬಗೆಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನವರಾತ್ರಿಯ ಸಮಯದಲ್ಲಿನ ಕಟ್ಟೆ ಪೂಜೆ, ಹುಲಿ ವೇಷ ಆರ್ಭಟವನ್ನು ಪರಿಚಯಿಸಲಾಯ್ತು. ಬಲೀಂದ್ರ ಪೂಜೆಯ ಮೌಲ್ಯವನ್ನು ಕಾರ್ಯಕ್ರಮದ ಮೂಲಕ ತಿಳಿಸಲಾಯ್ತು. ಇದೀಗ ವಿರಳವಾಗಿ ಕಾಣ ಸಿಗುವ ವಸಂತ ಕುಣಿತದ ಹೌದರಾಯನ ವಾಲಗದ ಕುಣಿತವನ್ನು ಬೆಂಗಳೂರನಲ್ಲಿ ಪ್ರದರ್ಶಿಸಿದ್ದು, ವಿಶೇಷವಾಗಿತ್ತು. ಹಾಗೇ ಭಜನಾ ಕುಣಿತವನ್ನು ಪ್ರದರ್ಶಿಸಿ‌ ಭಕ್ತಿ ಭಾವ ಮೆರೆಯಲಾಯ್ತು.

ಯಕ್ಷಗಾನ ಅಂದ್ರೆ ಕರಾವಳಿ ಭಾಗದಲ್ಲಿ ಆರಾಧಿಸಿ ಪೂಜಿಸುವರಿದ್ದಾರೆ.ವಿಶ್ವಕುಂದಾಪ್ರ‌ ದಿನದ ವಿಶೇಷ ಸಂದರ್ಭದಲ್ಲಿ ವೀರ ಅಭಿಮನ್ಯು ‌ಕಾಳಗದ ಯಕ್ಷಗಾನದಲ್ಲಿ ಅಭಿಮನ್ಯುನನ್ನು ಯುದ್ದಭೂಮಿಗೆ ಸುಭದ್ರೆಯ ನೋವಿನಿಂದಲೇ ಕಳಿಸಿಕೊಡುವ ಸಂದರ್ಭದ ಯಕ್ಷಗಾನದ ತುಣುಕನ್ನು ತೋರಿಸಲಾಯ್ತು.

ದಿಮ್ಸಾಲ್ ಸಂಸ್ಕೃತಿಯ ಅನಾವರಣವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿಸಲಾಯ್ತು. ಒಟ್ಟಿನಲ್ಲಿ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯ್ತು.

ಕ್ಯಾಮರಾಮ್ಯಾನ್ ಮಹೇಶ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ

RELATED ARTICLES

Related Articles

TRENDING ARTICLES