ಮೈಸೂರು: ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ಇಬ್ಬರ ಕೊಲೆ ನಡೆದಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಈಗಿನ ಪರಿಸ್ಥಿತಿಯು ತೋರಿಸುತ್ತದೆ. ಮುಖ್ಯಮಂತ್ರಿಯು ಆ ಭಾಗದ ಪ್ರವಾಸದಲ್ಲಿ ಇದ್ದಾಗಲೇ ಮತ್ತೊಂದು ಕೊಲೆಯಾಗಿದೆ. ಮುಖ್ಯಮಂತ್ರಿ ಬಳಿಯೇ ಇರುವ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಿಲ್ಲವೇಕೆ? ಇದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವೈಫಲ್ಯವಾಗಿದೆ. ಜನರಿಗೆ ರಕ್ಷಣೆ ಕೊಡಲು ಇವರಿಗೆ ಆಗುತ್ತಿಲ್ಲ’ ಎಂದು ದೂರಿದರು.
‘ರಾಜ್ಯದಲ್ಲಿ ಜನರು ಭಯದಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರಬರಲು ಹೆದರಿದ್ದಾರೆ. ಮನೆಯಿಂದ ಹೊರಬಂದರೆ ಮತ್ತೆ ಮನೆ ಸೇರುತ್ತೇವೆಯೋ, ಇಲ್ಲವೋ ಎನ್ನುವ ಭಯ ಅವರಲ್ಲಿದೆ ಎಂದು ಆಡಳಿತ ಸರ್ಕಾರದ ವೈಪಲ್ಯದ ವಿರುದ್ಧ ಆರೋಪಿಸಿದರು.
ಇನ್ನು ಹಿಂದಿನ ಸರ್ಕಾರಕ್ಕೂ, ಕಾನೂನು ಸುವ್ಯವಸ್ಥೆಗೆ ಕಾಪಾಡುವುದಕ್ಕೂ ಏನು ಸಂಬಂಧ?’ ಎಂದು ಪ್ರಶ್ನೆ ಮಾಡಿದರು.