ಬೆಂಗಳೂರು : ಬಿಜೆಪಿಯ ನಡೆಗೆ ಸ್ವತಃ ಆರ್ಎಸ್ಎಸ್ಸೇ ಮುನಿಸಿಕಿಕೊಂಡಿದೆ. ಮೈತ್ರಿ ಸರ್ಕಾರ ಉರುಳಿಸುವ ಯತ್ನದಲ್ಲಿ ಬ್ಯುಸಿ ಇರೋ ಬಿಜೆಪಿ ವಿರುದ್ಧ ಆರ್ಎಸ್ಎಸ್ ಅಸಮಧಾನ ವ್ಯಕ್ತಪಡಿಸಿದೆ.
ಆಪರೇಷನ್ ಕಮಲಕ್ಕೆ ಆರ್ಎಸ್ ವಿರೋಧ ವ್ಯಕ್ತಪಡಿಸಿದ್ದು, ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಕರೆದು ಆಪರೇಷನ್ಗೆ ಬ್ರೇಕ್ ಹಾಕಿ ಅಂತ ಆರ್ಎಸ್ಎಸ್ ನಾಯಕರು ಸೂಚನೆ ನೀಡಿದ್ದಾರೆ ಅಂತ ತಿಳಿದುಬಂದಿದೆ. ಆದರೆ, ಬಿಎಸ್ವೈ ಇದೇ ಕೊನೆಯ ಪ್ರಯತ್ನ ಎಂದು ಆರ್ಎಸ್ಎಸ್ ನಾಯಕರ ಮನವೊಲಿಸಿದ್ದಾರೆ. ಬಿಎಸ್ವೈ ಇದೇ ಕಡೆಯ ಪ್ರಯತ್ನ ಎಂದಿದ್ದಕ್ಕೆ ಆರ್ಎಸ್ಎಸ್ ಒಪ್ಪಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಆರ್ಎಸ್ಎಸ್ ಸೂಚನೆ..!
TRENDING ARTICLES