ನವದೆಹಲಿ : ರಾಜ್ಯದ ಗೃಹ ಮಂತ್ರಿ ಕಣ್ಣಿರು ಹಾಕ್ತಿರುವುದು ಇದೇ ಮೊದಲು ಎಂದು ನವದೆಹಲಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಗ ಜ್ಞಾನೇಂದ್ರ ಜನರ ಕಣ್ಣಿರು ಒರೆಸುವ ಕೆಲಸ ಮಾಡಬೇಕಿತ್ತು. ಅವರು ಮಾಧ್ಯಮಗಳ ಮುಂದೆ ಕಣ್ಣಿರು ಹಾಕ್ತಿದ್ದಾರೆ. ಇವರಿಗೆ ಕಾನೂನು ವ್ಯವಸ್ಥೆ ಕಾಪಾಡಲು ಸಾಧ್ಯವಾಗ್ತಿಲ್ಲ. ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಿ ಹೋಗಬೇಕು ಎಂದರು.
ಇನ್ನು, ಸರ್ಕಾರ ರಾತ್ರೊರಾತ್ರಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮ ರದ್ದು ಮಾಡಿದರು. ಹತ್ಯೆಯಾದ ಬಳಿಕ ಎಷ್ಟು ಸಮಯ ಬೇಕು. ಬರೀ ಬಾಯಿ ಮಾತಿಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಯಾವುದೇ ಕ್ರಮ ಆಗಿಲ್ಲ. ಹತ್ಯೆ ಮಾಡಿದರವರು ಯಾರೇ ಆಗಿದ್ದರು ಕೂಡಲೇ ಬಂಧಿಸಬೇಕು. ಜನರ ತಲೆ ಕಾಯುವ ಕೆಲಸ ಸರ್ಕಾರದ್ದು ಎಂದು ಹೇಳಿದರು.
ಅದಲ್ಲದೇ, ತೇಜಸ್ವಿ ಸೂರ್ಯ ಪ್ರತಿಯೊಬ್ಬರಿಗೆ ಭದ್ರತೆ ನೀಡಲು ಸಾಧ್ಯವಿಲ್ಲ ಅಂತಾರೆ. ಈ ಸರ್ಕಾರದ ಸಾಧನೆ ಏನು? ಇಡೀ ರಾಜ್ಯದಲ್ಲಿ ಗಲಾಟೆ ಎಬ್ಬಿಸಿ, ಶಾಂತಿ ಕದಡಿದ್ರಿ. ವಿದ್ಯಾರ್ಥಿಗಳು ಮನಸ್ಸು ಕೆಡಿಸಿದ್ರಿ. ನಿಮ್ಮ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ. ಇದೇ ನಿಮ್ಮ ಸರ್ಕಾರದ ಸಾಧನೆ. ಈಗ ನೋಡಿದ್ರೆ ಗೃಹ ಸಚಿವರು ಕ್ಯಾಮರಾ ಮುಂದೆ ಕಣ್ಣಿರಿಡ್ತಿದ್ದಾರೆ ಎಂದರು.