ನವದೆಹಲಿ: ತಪ್ಪಿತಸ್ಥರಿಗೆ ಕಠೋರವಾದ ಶಿಕ್ಷೆ ಆಗಲಿದೆ ಎಂದು ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ಎಂ.ಪಿ ರೇಣುಕಾಚಾರ್ಯ ರಾಜೀನಾಮೆ ನೀಡುವ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ತನಿಖೆ ನಡೆಯುವಾಗ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅತೀ ಶೀಘ್ರವಾಗಿ ತನಿಖೆ ನಡೆಯಲಿದೆ ಎಂದು ತಿಳಿಸಿದರು.
ಅಲ್ಲದೇ ಒಂಭತ್ತು ತಿಂಗಳ ಅವಧಿಯಲ್ಲಿ ಹಲವು ಬಿಜೆಪಿ ಮುಖಂಡರ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ತುಂಬಾ ದುಃಖದ ವಿಷಯವಾಗಿದೆ. ತಪ್ಪಿತಸ್ಥರಿಗೆ ಕಠೋರವಾದ ಶಿಕ್ಷೆ ಆಗಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ಆದ್ರೆ, ರಾಜಸ್ಥಾನಕ್ಕಿಂತ ಕರ್ನಾಟಕವೇ ಮೇಲೂ. ಕರ್ನಾಟಕಕ್ಕೂ- ರಾಜಸ್ಥಾನಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ರಾಜಸ್ಥಾನದಲ್ಲಿ ಪ್ರತಿ ದಿನ ಮಹಿಳೆಯರ ಮೇಲೆ 18 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಪ್ರತಿ ದಿನ ಏಳು ಕೊಲೆಗಳು ಆಗುತ್ತವೆ ಎಂದು ಪ್ರವೀಣ್ ಹತ್ಯೆಯನ್ನು ರಾಜಸ್ಥಾನಕ್ಕೆ ಹೋಲಿಸಿ ಮಾತನಾಡಿದರು.