ಚಿಕ್ಕಮಗಳೂರು: ಕ್ಷೇತ್ರದ ಎದುರಾಳಿ ಪಕ್ಷದವರಿಗಿಂತ ಆನೆಯದ್ದೆ ಭಯ ಉಂಟಾಗಿದ್ದು, ಆನೆ ಕಾಟ ತಾಳಲಾರದೆ ಮೇಲಾಧಿಕಾರಿಗೆ ಶಾಸಕರು ಪತ್ರ ಬರೆದಿದ್ದಾರೆ.
ತಮ್ಮ ಕ್ಷೇತ್ರದ ಆನೆ ಉಪಟಳದ ಬಗ್ಗೆ ಅನುಮಾನ ಹೊರಹಾಕಿದ ಶಾಸಕ ಶೃಂಗೇರಿ ಶಾಸಕ ಟಿಡಿ ರಾಜೇಗೌಡರಿಗೆ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಕ್ಷೇತ್ರ ವ್ಯಾಪ್ತಿಯ ವನ್ಯಜೀವಿ ವಿಭಾಗಕ್ಕೆ ಆನೆ ತಂದು ಬಿಟ್ಟಿದ್ದಾರೆ. “ಕಾವೇರಿ ಟಸ್ಕರ್” ಎನ್ನುವ ಆನೆ ಕೊಪ್ಪ, ಎನ್ಆರ್ ಪುರದಲ್ಲಿ ದಾಂದಲೆ ಎಬ್ಬಿಸುತ್ತಿದೆ. ಆನೆ ಬಿಟ್ಟಿರೋ ಅರಣ್ಯ ಇಲಾಖೆ ಉದ್ದೇಶ ಏನು ಗೊತ್ತಾಗುತ್ತಿಲ್ಲ ಇದರಿಂದ ರೋಸಿ ಹೋದ ಶಾಸಕ ರಾಜೇಗೌಡರಿಂದ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಇನ್ನು, ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದು, ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳಿಗೆ ಆನೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ. ಹಲವು ಹಳ್ಳಿಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆನೆ ಸ್ಥಳಾಂತರಿಸದಿದ್ರೆ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಪತ್ರದಲ್ಲಿ ಬರೆದಿದ್ದಾರೆ.