Saturday, November 23, 2024

ಸಿಎಂ ಆಗುವ ಅರ್ಹತೆ ನಂಗೂ ಇದೆ : ಸಚಿವ ಉಮೇಶ್ ಕತ್ತಿ

ವಿಜಯಪುರ: ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ನಂಗೂ ಇದೆ ಎಂದು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಹೇಳಿಕೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇನ್ನೂ 60 ವರ್ಷ , ಬಿಜೆಪಿಯ ನಿಯಮದ ಪ್ರಕಾರ ಸಕ್ರಿಯ ರಾಜಕಾರಣದಲ್ಲಿರಲು ಇನ್ನೂ 15 ವರ್ಷ ಅವಕಾಶವಿದೆ, ಅಷ್ಟರೊಳಗೆ ನಮಗೂ ಮುಖ್ಯಮಂತ್ರಿ ಅವಕಾಶ ಬರುತ್ತದೆ, ನಾನೂ 9 ಬಾರಿ ಶಾಸಕನಾಗಿ ಆರಿಸಿ ಬಂದಿರುವೆ ಎಂದು ತಮ್ಮ ಹಕ್ಕು ಮಂಡನೆ ಮಾಡಿದರು.

ಇನ್ನು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ತಾರತಮ್ಯ ಮುಂದುವರೆದರೇ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ, ಅದಕ್ಕೆ ಉತ್ತರ ಕರ್ನಾಟಕದ ಬಹುತೇಕ ಶಾಸಕ, ಸಂಸದರ ಸಹಮತವಿದೆ, ಕೆಲ ಒತ್ತಡದ ಕಾರಣ ಮಾತನಾಡದೇ ಸುಮ್ಮನಿದ್ದಾರೆ ಎಂದರು.
ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ನಡೆದಿದ್ದು, ಇದರಿಂದಾಗಿ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷ ಚೂರು ಚೂರಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದರೂ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಬೆಂಬಲಿಗರು ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಹುಚ್ಚು ಹಿಡಿದಿದೆಯೋ ಗೊತ್ತಿಲ್ಲ, ಇದರಿಂದ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದರು. ಉತ್ತಮ ಯೋಜನೆಗಳಿಂದಾಗಿ ಬಿಜೆಪಿ ಮುಂದಿನ ಐದೂ ವರ್ಷ ಅಧಿಕಾರದಲ್ಲಿರಲಿದೆ ಎಂದರು.

RELATED ARTICLES

Related Articles

TRENDING ARTICLES